ಜನವರಿ 4 ರಂದು ವೈಭವದ ಆಳ್ವಾಸ್ ವಿರಾಸತ್ ಗೆ ಚಾಲನೆ
ಮಂಗಳೂರು, ಜನವರಿ 01: ಜೈನ ಕಾಶಿ ಮೂಡಬಿದರೆ ಯಲ್ಲಿ ಪ್ರತಿವರ್ಷ ಆಯೋಜಿಸಲಾಗುವ ವೈಭವದ ಆಳ್ವಾಸ್ ವಿರಾಸತ್ ಗೆ ದಿನಗಣನೆ ಆರಂಭವಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 'ಆಳ್ವಾಸ್ ವಿರಾಸತ್' ಗೆ ಇದೇ ಜನವರಿ 4 ರಂದು ಚಾಲನೆ ದೊರಕಲಿದೆ.
25 ವರ್ಷಗಳಿಂದ ಆಯೋಜಿಸಲಾಗುತ್ತಿರುವ ಈ ಆಳ್ವಾಸ್ ವಿರಾಸತ್ ಈ ಬಾರಿ ಜನವರಿ 4ರಿಂದ 6ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಉತ್ಸವದಲ್ಲಿ ಎಂದಿನಂತೆ ಪ್ರತಿ ದಿನ ಪೂರ್ವಾರ್ಧದಲ್ಲಿ ಸಂಗೀತ, ಉತ್ತಾರಾರ್ಧದಲ್ಲಿ ನೃತ್ಯವು ಸಂಸ್ಕೃತಿ ಪ್ರಿಯರ ಮನಸ್ಸನ್ನು ಸೂರೆಗೊಳ್ಳಲಿದೆ. ಪ್ರತಿದಿನ ಮುಸ್ಸಂಜೆ 6 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮಗಳು ರಾತ್ರಿ 10.30ಕ್ಕೆ ಮುಕ್ತಾಯಗೊಳ್ಳುತ್ತವೆ. ಜನವರಿ 4ರಂದು ಸಂಜೆ ಆಳ್ವಾಸ್ ವಿರಾಸತ್ ಉದ್ಘಾಟನೆಗೊಳ್ಳಲಿದೆ.

ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ನಡೆಯಲಿದೆ. ಬೃಹತ್ ವೇದಿಕೆ ಇದಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತಹ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.












Click it and Unblock the Notifications