ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ಅಪಘಾತ ತಡೆದ ಫ್ರಾಂಕ್ಲಿನ್‌ಗೆ ಸನ್ಮಾನ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಆಗಸ್ಟ್ 8 : ರಥಪುಷ್ಪದ ಹೂವನ್ನು ಕೈಯಲ್ಲಿ ಹಿಡಿದು ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತ ತಪ್ಪಿಸಿದ ಪಚ್ಚನಾಡಿಯ ಕೃಷಿಕ ಫ್ರಾಂಕ್ಲಿನ್‌ ಫೆರ್ನಾಂಡೀಸ್‌ ಅವರನ್ನು ಸಂಸದ ನಳೀನ್ ಕುಮಾರ್ ಕಟೀಲ್ ಅವರು ರೈಲ್ವೆ ಇಲಾಖೆ ಪರವಾಗಿ ಸನ್ಮಾನಿಸಿದ್ದಾರೆ.

ಶುಕ್ರವಾರ ಫ್ರಾಂಕ್ಲಿನ್‌ ಫೆರ್ನಾಂಡೀಸ್‌ ಅವರ ನಿವಾಸಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ರೈಲ್ವೆ ಇಲಾಖೆ ಪರವಾಗಿ ನೀಡಿದ ಪ್ರಮಾಣ ಪತ್ರ ಹಾಗೂ 2,500 ರೂ. ನಗದು ಬಹುಮಾನವನ್ನು ನೀಡಿದರು. [ರೈಲು ಅಪಘಾತ ತಪ್ಪಿಸಿದ ಮಂಗಳೂರು ರೈತ]

nalin kumar kateel

ನಂತರ ಮಾತನಾಡಿದ ಅವರು, ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿ ಹೂವನ್ನು ಕೈಯಲ್ಲಿ ಹಿಡಿದು ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತ ತಪ್ಪಿಸಿದ ಫ್ರಾಂಕ್ಲಿನ್‌ ಅವರಿಗೆ ರೈಲ್ವೆ ಇಲಾಖೆ ವತಿಯಿಂದ ವಿಶೇಷ ಪ್ರಶಸ್ತಿ ನೀಡುವ ಸಂಬಂಧ ಇಲಾಖೆ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು. [ಈ 'ವಿಶೇಷ ಅತಿಥಿ'ಗಳ ಮೇಲೆ ಕಣ್ಣು ಇಡುವವರು ಯಾರು?]

ಬಹುದೊಡ್ಡ ಅಪಘಾತವನ್ನು ಫ್ರಾಂಕ್ಲಿನ್‌ ಅವರು ತಡೆದಿದ್ದಾರೆ. ರೈಲ್ವೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಾಮಾನ್ಯರ ನೆಲೆಯಲ್ಲಿ ಅವರು ಮಾಡಿ ತೋರಿಸಿದ್ದಾರೆ. ಹೀಗಾಗಿ ಫ್ರಾಂಕ್ಲಿನ್‌ ಅವರು ಜನಸಾಮಾನ್ಯರ ಹೀರೋ ಆಗಿ ಮೂಡಿಬಂದಿದ್ದಾರೆ ಎಂದು ಶ್ಲಾಘಿಸಿದರು. [ಮಧ್ಯಪ್ರದೇಶದ ಅವಳಿ ರೈಲು ದುರಂತದ ಚಿತ್ರಗಳು]

mangaluru

ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಸುಧೀರ್‌ ಶೆಟ್ಟಿ ಕಣ್ಣೂರು, ವಿಹಿಂಪ ಪ್ರಮುಖ ಜಿತೇಂದ್ರ ಕೊಟ್ಟಾರಿ, ಸ್ಥಳೀಯ ಪ್ರಮುಖರಾದ ಸಂದೀಪ್‌ ಪಚ್ಚನಾಡಿ, ಪೂಜಾ ಪೈ, ಪ್ರಶಾಂತ್‌ ಪೈ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫ್ರಾಂಕ್ಲಿನ್‌ ಏನು ಮಾಡಿದ್ದರು? : ಆ.1ರ ಶನಿವಾರ ಮಂಗಳೂರು ನಗರದ ಹೊರ ವಲಯದ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮಿನಿಸಿದ್ದ ಸ್ಥಳೀಯ ಫ್ರಾಂಕ್ಲಿನ್‌ ಅವರು ರಥ ಪುಷ್ಪವನ್ನು ಕೈಯಲ್ಲಿ ಹಿಡಿದು ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

English summary
Dakshina Kannada MP Nalin Kumar Kateel honored farmer Frank Fernandes who averted a possible train mishap at Bondel-Pachanady on August 1, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X