ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಾರ್ಥನೆಗೆ ಒಲಿದ ನಾಗದೇವರು; ನಾಗ ಸಾನಿಧ್ಯದಲ್ಲಿ ಉಕ್ಕಿದ ಗಂಗೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 05; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಕರಾವಳಿಯ ಜನರ ಬದುಕಿನ ಸಂಸ್ಕೃತಿಯಲ್ಲಿ ಅಡಕವಾಗಿರುವ ನಾಗಾರಾಧನೆಯನ್ನು ಸಾಕಷ್ಟು ಭಯ-ಭಕ್ತಿಯಿಂದ ಮಾಡಲಾಗುತ್ತದೆ. ನಾಗ ಶಕ್ತಿಗಳೂ ತಮ್ಮ ಕಾರಣಿಕದ ಮೂಲಕ ಜನರ ನಂಬಿಕೆಯನ್ನು ಜೀವಂತವಾಗಿಸಿದೆ.‌

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ‌ ಪೆರ್ನೆಯಲ್ಲಿಯೂ ನಾಗದೇವರು ಕಾರಣಿಕ ತೋರಿಸಿದ್ದಾರೆ. ಪೆರ್ನೆಯ ನಾಗನ ಕಟ್ಟೆಯ ಬಳಿಯೆ ಇದ್ದ ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗಿತ್ತು. ಹೀಗಾಗಿ ನಾಗದೇವರಲ್ಲಿ ಪ್ರಾರ್ಥನೆ ಮಾಡಿ ಅಲ್ಲೇ ಪಕ್ಕದಲ್ಲಿ ಇನ್ನೊಂದು ಕೊಳವೆ ಬಾವಿ ಕೊರೆಯಲಾಯಿತು. ಆದರೆ ಆಶ್ಚರ್ಯ ಎಂಬಂತೆ 200 ಅಡಿ ಆಳದಲ್ಲಿಯೇ ಸುಮಾರು‌ ಐದೂವರೆ ಇಂಚು ನೀರು ಲಭ್ಯವಾಗಿದೆ. ಇದಲ್ಲದೆ ಮೊದಲು ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿಯೂ ಅದೇ ಸಂದರ್ಭ ನೀರು ಉಕ್ಕಿ ಹರಿದಿದೆ‌.

ಬೋರ್ ವೆಲ್ ನಲ್ಲಿ ಉಕ್ಕಿದ ಜಲ: ಪೂಜೆಯ ಪವಾಡ?ಬೋರ್ ವೆಲ್ ನಲ್ಲಿ ಉಕ್ಕಿದ ಜಲ: ಪೂಜೆಯ ಪವಾಡ?

ಪರ್ನೆಯ ಶ್ರೀ ನಾಗದೇವರ ಸೇವಾ ಸಮಿತಿ, ಶ್ರೀ ನಾಗ ದೇವರ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವನ್ನು ಬಹಳ ಅದ್ದೂರಿಯಿಂದ ನಡೆಸಲು ತೀರ್ಮಾನ ಮಾಡಲಾಗಿತ್ತು. ಆದರೆ ಇದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಕಾರ್ಯಕ್ರಮ ನಡೆಸುವುದು ಹೇಗೆ? ಎಂಬುದು ಭಕ್ತರ ಚಿಂತೆಯಾಗಿತ್ತು.

ಬೋರ್ ವೆಲ್ ಮೃತ್ಯುಕೂಪಕ್ಕೆ ಇನ್ನೆಷ್ಟು ಜನ ಬಲಿಯಾಗಬೇಕು..?ಬೋರ್ ವೆಲ್ ಮೃತ್ಯುಕೂಪಕ್ಕೆ ಇನ್ನೆಷ್ಟು ಜನ ಬಲಿಯಾಗಬೇಕು..?

Nagaradane Old Borewell Recharged In Bantwal

ಸಮಿತಿಯ ಸದಸ್ಯರೆಲ್ಲರೂ ಈ ಹಿಂದೆ ಇದ್ದ ಕೊಳವೆ ಬಾವಿ ಪಕ್ಕದಲ್ಲೇ ಮತ್ತೊಂದು ಕೊಳವೆ ಬಾವಿ ಕೊರೆಸುವ ತೀರ್ಮಾನ ಮಾಡಿದ್ದರು. ‌ಆದರೆ ಅದರಲ್ಲೂ ನೀರು ಸಿಗದಿದ್ದರೆ ಇದ್ದ ಹಣವೂ ವ್ಯರ್ಥ ಅಂತಾ ಭಾವಿಸಿದ್ದರು.

ಆದರೆ ಕರಾವಳಿಯ ನಾಗ ಶಕ್ತಿಯ ಹಿನ್ನಲೆ ತಿಳಿದಿದ್ದ ಕೆಲಮಂದಿ ನಾಗದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೊಳವೆ ಬಾವಿ ಕೊರೆಯಿಸುವ ತೀರ್ಮಾನ ಮಾಡಿದರು. ಹೀಗೆ ಕೊರೆಯಿಸಿದ ಕೊಳವೆ ಬಾವಿಯಲ್ಲಿ ಕೇವಲ 200 ಅಡಿ ಆಳಕ್ಕೆ ಹೋಗುವಾಗಲೇ ಭರಪೂರ ನೀರು ಸಿಕ್ಕಿದ್ದು ಜನರು ಸಂತಸಗೊಂಡಿದ್ದಾರೆ.

ಚರ್ಚೆಗೆ ಗ್ರಾಸವಾಗಿದ್ದ ಉಡುಪಿಯ ನಾಗ ಪವಾಡದ ಬಗ್ಗೆ ಸ್ಪಷ್ಟನೆ ಕೊಟ್ಟ ನಾಗರಾಜ್ ಭಟ್ಚರ್ಚೆಗೆ ಗ್ರಾಸವಾಗಿದ್ದ ಉಡುಪಿಯ ನಾಗ ಪವಾಡದ ಬಗ್ಗೆ ಸ್ಪಷ್ಟನೆ ಕೊಟ್ಟ ನಾಗರಾಜ್ ಭಟ್

ಬತ್ತಿದ ಕೊಳವೆ ಬಾವಿಯಲ್ಲಿ ಗಂಗೆ ಮತ್ತು ಗಂಗಾವತರ ತೋರಿಸಿರೋದು ಇದೆಲ್ಲಾ ಪ್ರಾರ್ಥನೆಯ ಫಲ ಶ್ರುತಿ ಎಂಬುದು ಭಕ್ತರ ನಂಬಿಕೆಯಾಗಿದೆ. ನಾಗ ಸಾನಿಧ್ಯವಿರುವ ಪ್ರದೇಶಗಳಲ್ಲಿ ಜಲ ಹೇರಳವಾಗಿದ್ದು, ನಾಗನ ಆಶೀರ್ವಾದ ಸಿದ್ಧಿಸಿದರೆ ಗಂಗೆ ಆಶೀರ್ವದಿಸುತ್ತಾಳೆ ಅಂತಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Nagaradane Old Borewell Recharged In Bantwal

ಸದ್ಯ ನೀರು ಉಕ್ಕಿ ಹರಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾಗದೇವರ ಕಾರಣಿಕದ ಬಗ್ಗೆ ಸ್ಥಳೀಯರು ಕೊಂಡಾಡುತ್ತಿದ್ದಾರೆ.

English summary
Nagaradhane by devotes old borewell recharged in Bantwal, Mangaluru and water found in 200 feet in the new borewell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X