ಪುತ್ತೂರಿನ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಯದುವೀರ್ ಭೇಟಿ

ಮಂಗಳೂರು, ನವೆಂಬರ್ 3: ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಗುರುವಾರ ಭೇಟಿ ನೀಡಿದರು.

ಪುತ್ತೂರು ತಾಲೂಕಿನ ಹನುಮಗಿರಿ ಮಂಚಮುಖಿ ಆಂಜನೇಯ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಕೋದಂಡರಾಮನ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗಿಯಾದ ಯದುವೀರ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವರು ಅಲ್ಲಿಂದ ಬಂದು ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಉಪವಾಸದಲ್ಲಿದ್ದ ಯದುವೀರ್

ಉಪವಾಸದಲ್ಲಿದ್ದ ಯದುವೀರ್

ಕ್ಷೇತ್ರಕ್ಕೆ ಬರುವಾಗಲೇ ಉಪವಾಸ ವ್ರತದಲ್ಲಿದ್ದ ಯದುವೀರ್ ಪೂಜೆಯ ಬಳಿಕ ಕ್ಷೇತ್ರದಲ್ಲಿ ಉಪಾಹಾರ ಸೇವಿಸಿದರು.

ಯದುವೀರ್ ಮತ್ತು ಪಂಚಮುಖಿ ಆಂಜನೇಯ

ಯದುವೀರ್ ಮತ್ತು ಪಂಚಮುಖಿ ಆಂಜನೇಯ

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಭಾಗಕ್ಕೆ ಬಂದಾಗಲೆಲ್ಲಾ ಪುತ್ತೂರು ತಾಲೂಕಿನ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು. ಅವರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ.

ನಾಡಿನ ಜನರಿಗಾಗಿ ಮಹಾರಾಜರ ಪ್ರಾರ್ಥನೆ

ನಾಡಿನ ಜನರಿಗಾಗಿ ಮಹಾರಾಜರ ಪ್ರಾರ್ಥನೆ

ಪಂಚಮುಖಿ ಆಂಜನೇಯ ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, "ನಾಡಿನ ಸಮಸ್ತ ಜನರಿಗೆ ಸುಖ ಶಾಂತಿ ಲಭಿಸಲಿ, ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ," ಎಂದು ದೇವರಲ್ಲಿ ಬೇಡಿದ್ದೇನೆ ಎಂದು ಹೇಳಿದರು.

ಸುಂದರ ತಾಣ ಹನುಮಗಿರಿ

ಸುಂದರ ತಾಣ ಹನುಮಗಿರಿ

ಪಂಚಮುಖಿ ಆಂಜನೇಯನ ಈ ದೇವಸ್ಥಾನ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿದೆ. ಇಲ್ಲಿನ ಹನುಮಗಿರಿ ಬೆಟ್ಟದಲ್ಲಿ ಆಂಜನೇಯ ಸ್ವಾಮಿಯ ಸುಂದರವಾದ ದೇವಾಲಯವನ್ನು ನಿರ್ಮಿಸಲಾಗಿದೆ.

ಹನುಮಂತ, ನರಸಿಂಹ, ಗರುಡ, ವರಾಹ, ಹಯಗ್ರೀವ ಹೀಗೆ ಐದು ಮುಖಗಳನ್ನು ಹೊತ್ತ ಆಂಜನೇಯ ದೇವರನ್ನು ಇಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+