ಪುತ್ತೂರಿನಲ್ಲಿ ಯಕ್ಷಗಾನ ನೋಡಲು ಬಂದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಕೊಲೆ
ಮಂಗಳೂರು, ಸೆಪ್ಟೆಂಬರ್ 4: ಚಿಟ್ ಫಂಡ್ ನಡೆಸುತ್ತಿದ್ದ, ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿಯೂ ಆಗಿದ್ದ ಯುವಕನೊಬ್ಬನನ್ನು ದುರ್ಷರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುತ್ತೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾರ್ತಿಕ್ ಮೇರ್ಲ (30) ಕೊಲೆಯಾದ ಯುವಕ. ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಸಂಪ್ಯ ಪೊಲೀಸ್ ಠಾಣೆ ಸಮೀಪ ಈತನನ್ನು ಕೊಲೆ ಮಾಡಲಾಗಿದೆ.
ಸಾತ್ಕೋಳಿಯಲ್ಲಿ ತಡರಾತ್ರಿ ಮಚ್ಚಿನಿಂದ ಕೊಚ್ಚಿ ದಂಪತಿ ಬರ್ಬರ ಹತ್ಯೆ
ಸಂಪ್ಯ ಪೊಲೀಸ್ ಠಾಣೆ ಸಮೀಪ ಗಣೇಶೋತ್ಸವವನ್ನು ಏರ್ಪಡಿಸಲಾಗಿತ್ತು. ಅಲ್ಲಿಗೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕಾರ್ತಿಕ್ ಯಕ್ಷಗಾನ ನೋಡಲು ಬಂದಿದ್ದಾನೆ. ಈ ವೇಳೆ ಚರಣ್ ರಾಜ್, ಕಿರಣ್, ಪ್ರತೀಶ್ ಎಂಬುವರ ಜೊತೆ ಮಾತುಕತೆ ನಡೆಸಿದ್ದ. ಇದ್ದಕ್ಕಿದ್ದಂತೆ ಮಾತು ಬೆಳೆದು ಪ್ರತೀಶ್ ಎಂಬಾತ ಕಾರ್ತಿಕ್ ಎದೆ ಭಾಗಕ್ಕೆ ಇರಿದಿದ್ದಾನೆ. ಕಾರ್ತಿಕ್ ಕಿರುಚಿಕೊಳ್ಳುತ್ತಿದ್ದಂತೆ ಮೂವರು ಕಾರು ಹತ್ತಿ ಪರಾರಿಯಾಗಿದ್ದಾರೆ.
ತಕ್ಷಣವೇ ಸಂಪ್ಯ ಪೊಲೀಸರು ಬಂದು ಆತನನ್ನು ಆಸ್ಪತ್ರೆಗೆ ರವಾನಿಸಿದ್ದು, ಮಾರ್ಗಮಧ್ಯೆ ಕಾರ್ತಿಕ್ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.