ದುಬೈನಿಂದ ಮಂಗಳೂರಿಗೆ ಬಂದ ಕೇರಳದ ಯುವಕನಿಗೆ ಮಂಕಿಪಾಕ್ಸ್: ಮಂಗಳೂರಲ್ಲಿ ಕಟ್ಟೆಚ್ಚರ

ಮಂಗಳೂರು, ಜುಲೈ 19: ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಬಂದ ಕೇರಳ ಮೂಲದ ಯುವಕನಿಗೆ ಮಂಕಿಪಾಕ್ಸ್ ಧೃಡಪಟ್ಟಿದೆ‌. ಯುವಕ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದು,ಮಂಗಳೂರಿನಲ್ಲೂ ಸೋಂಕು ಹರಡುವ ಆತಂಕ ಎದುರಾಗಿದೆ. ಮುನ್ನೆಚ್ಚರಿಕ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆಯು ಸೋಂಕಿತ ಯುವಕನೊಂದಿಗೆ ಪ್ರಯಾಣಿಸಿದ್ದವರೂ ಸೇರಿದಂತೆ 35 ಮಂದಿಗೆ ಪ್ರತ್ಯೇಕ ವಾಸಕ್ಕೆ ಒಳಗಾಗುವಂತೆ ಸೂಚನೆ ನೀಡಿದೆ.

ಕೇರಳ ಕಣ್ಣೂರಿನ 31 ವರ್ಷದ ಯುವಕ ಜುಲೈ 13 ರಂದು ದುಬೈನಿಂದ ತವರಿಗೆ ಮರಳಿದ್ದ. ಆದರೆ ಜುಲೈರಂದು ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು ಹಾಗೂ ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದವು. ಕೇರಳದ ಕಣ್ಣೂರಿನ ಪೆರಿಯಾರ್ ವೈದ್ಯಕೀಯ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಆತನಿಗೆ ಮಂಕಿಪಾಕ್ಸ್ ಹೊಂದಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

"ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಯುವಕ ಇಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಿದ್ದ. ಹಾಗಾಗಿ ಮಂಗಳೂರಿನಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಅಪರ ಆರೋಗ್ಯಾಧಿಕಾರಿ ಡಾ.ರಾಜೇಶ್ ಹೇಳಿದ್ದಾರೆ.

 35 ಮಂದಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ

35 ಮಂದಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ

"ದುಬೈನಿಂದ ಯುವಕ ಪ್ರಯಾಣಿಸಿದ್ಧ ವಿಮಾನದಲ್ಲಿ ಒಟ್ಟು 191 ಮಂದಿ ಪ್ರಯಾಣಿಕರಿದ್ದರು.ವಿಮಾನದಲ್ಲಿ ಯುವಕ ಕುಳಿತಿದ್ದ ಸಾಲು, ಅದರ ಎದುರು ಮತ್ತು ಹಿಂದಿನ ಮೂರು ಸಾಲುಗಳ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ್ದವರು ಸೇರಿ ಒಟ್ಟು 35 ಮಂದಿಗೆ ಪ್ರತ್ಯೇಕವಾಸಕ್ಕೆ ಒಳಗಾಗುವಂತೆ ಸೂಚಿಸಿದ್ದೇವೆ" ಅಂತಾ ಡಾ.ರಾಜೇಶ್ ಹೇಳಿದ್ದಾರೆ.

 ಕೇರಳದಲ್ಲಿ 2ನೇ ಮಂಕಿ ಪಾಕ್ಸ್ ಪ್ರಕರಣ

ಕೇರಳದಲ್ಲಿ 2ನೇ ಮಂಕಿ ಪಾಕ್ಸ್ ಪ್ರಕರಣ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಈ ಮೂಲಕ ಕೇರಳದಲ್ಲಿ 2ನೇ ಮಂಕಿ ಪಾಕ್ಸ್ ಪ್ರಕರಣ ಕಾಣಿಸಿಕೊಂಡಿದೆ. ವಿಮಾನ ನಿಲ್ದಾಣದ ಸಿಬ್ಬಂದಿಗಳಲ್ಲೂ ಮಂಕಿ ಪಾಕ್ಸ್ ಭಯ ಆವರಿಸಿದ್ದು, ತುರ್ತು ಸಂದರ್ಭ ಎದುರಾದರೆ ರೋಗ ಲಕ್ಷಣ ಪತ್ತೆಯಾದ ರೋಗಿಗಳ ಆರೈಕೆಗೆ ವೆನ್‌ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಮಂಕಿ ಪಾಕ್ಸ್ ರೋಗ ಲಕ್ಷಣ ಪತ್ತೆಯಾದ ವ್ಯಕ್ತಿಯ ನೇರ ಸಂಪರ್ಕಕ್ಕೆ ಒಳಗಾಗಿದ್ದ ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ಆತನ ಜತೆ ಬಂದಿರುವ ಸಹ ಪ್ರಯಾಣಿಕರಿಗೆ ಐಸೋಲೇಷನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

 ಎಮಿಗ್ರೇಶನ್ ಅಧಿಕಾರಿಗೆ ಐಸೊಲೇಸನ್‌ನಲ್ಲಿರಲು ಸೂಚನೆ

ಎಮಿಗ್ರೇಶನ್ ಅಧಿಕಾರಿಗೆ ಐಸೊಲೇಸನ್‌ನಲ್ಲಿರಲು ಸೂಚನೆ

ವ್ಯಕ್ತಿ ದುಬೈನಿಂದ ಬಂದಿದ್ದ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಈ ಪೈಕಿ ದಕ್ಷಿಣಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಜಿಲ್ಲೆಯ 13, ಕಣ್ಣೂರಿನ ಒಬ್ಬ ಸೇರಿದಂತೆ ಮಂಗಳೂರು ವಿಮಾನನಿಲ್ದಾಣದ ಎಮಿಗ್ರೇಶನ್ ವಿಭಾಗದ ಅಧಿಕಾರಿಯೊಬ್ಬರನ್ನು ಐಸೋಲೇಷನ್ ಇರುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. 21 ದಿನಗಳ ಪ್ರತ್ಯೇಕ ವಾಸದ ಸಮಯದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದಿದ್ದರೆ ಅವರಿಂದ ಇತರರಿಗೆ ಅಪಾಯವಿಲ್ಲ ಎಂಬುದು ಸ್ಪಷ್ಟಪಡಿಸಲಾಗಿದೆ.

 ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ

ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ

ಮಂಕಿಪಾಕ್ಸ್ ದೃಢಪಟ್ಟಿರುವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಂಕಿ ಪಾಕ್ಸ್ ಜಿಲ್ಲಾ ಆರೋಗ್ಯ ಅಧಿಕಾರಿಗಳ ನಿರ್ದೇಶನ ಪ್ರಕಾರ ವಿಮಾನ ನಿಲ್ದಾಣದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರಿಗೆ ಸೂಕ್ಷ್ಮ ತಪಾಸಣೆ ನಡೆಸಿಯೇ ಕಳುಸಿಸಲಾಗುತ್ತಿದೆ. ಪ್ರಯಾಣಿಕರು ಮಂಕಿ ಪಾಕ್ಸ್ ಅಪಾಯವಲ್ಲದ ಪ್ರದೇಶದಿಂದ ಬಂದರೂ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ಸಂಭವನೀಯ ಪ್ರಕರಣಗಳನ್ನು ಪತ್ತೆ ಹಚ್ಚಲು ಪ್ರಯಾಣಿಕರ ಸ್ಕ್ಯಾನಿಂಗ್ ಮುಂದುವರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ ಈ ಮಂಕಿ ಫಾಕ್ಸ್‌ ಕಾಡು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು, ಅವರು ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದಲೂ ಹರಡುತ್ತದೆ. ಪ್ರಸ್ತುತ ವಿಶ್ವದ 63 ರಾಷ್ಟ್ರಗಳಲ್ಲಿ ಸುಮಾರು 9 ಸಾವಿರ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+