ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುವರ್ಣ ತ್ರಿಭುಜ ಅವಘಡದಲ್ಲಿ ನಾಪತ್ತೆಯಾದ ಅಣ್ಣ:ಸಹೋದರ ಆತ್ಮಹತ್ಯೆ

|
Google Oneindia Kannada News

ಉಡುಪಿ, ಮೇ 16: ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಸುವರ್ಣ ತ್ರಿಭುಜ ಬೋಟ್ ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಪೈಕಿ ಚಂದ್ರಶೇಖರ್ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಬರ ಸಿಡಿಲಿನಂತೆ ಎರಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಳೆದ‌ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಚಂದ್ರಶೇಖರ್ ಅವರ ಸಹೋದರ ರಮೇಶ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಕಾಣೆಯಾಗಿದ್ದ ಏಳು ಜನ ಮೀನುಗಾರರ ಪೈಕಿ ಚಂದ್ರಶೇಖರ್ ಒಬ್ಬರಾಗಿದ್ದು, ಅಣ್ಣನ ಅಗಲುವಿಕೆಯಿಂದ ತಮ್ಮ ರಮೇಶ್ ತೀವ್ರವಾಗಿ ನೊಂದಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದ ರಮೇಶ್ 3 ದಿನಗಳ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಮೀನುಗಾರರ ನಾಪತ್ತೆ ಪ್ರಕರಣ: ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ಮೀನುಗಾರರ ನಾಪತ್ತೆ ಪ್ರಕರಣ: ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್

ಮೃತ ರಮೇಶ್ ಅಣ್ಣನ ಅಗಲುವಿಕೆಯಿಂದ ತೀವ್ರ ಆಘಾತ ಅನುಭವಿಸುತ್ತಿದ್ದರು. ಮೂರು ದಿನಗಳ ಹಿಂದೆ ರಮೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಕಳೆದ‌ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ.

Missing fishermen Chandra Shekhar s brother Ramesh committed suicide

ಕೆಲ ದಿನಗಳ ಹಿಂದೆ ನೌಕಾ‌ಪಡೆ ಮತ್ತು ಮೀನುಗಾರರು ಸತತವಾಗಿ ಹುಡುಕಾಟ ನಡೆಸಿದ ಬಳಿಕ ಸುವರ್ಣ ತ್ರಿಭುಜ ಬೋಟ್ ನ ಅವಶೇಷ ಮಲ್ವಾನಾ ಪ್ರದೇಶದಲ್ಲಿ ಪತ್ತೆಯಾಗಿತ್ತು. ಆದರೆ ಮೀನುಗಾರರ ಸುಳಿವು ಲಭಿಸದ ಹಿನ್ನೆಲೆಯಲ್ಲಿ ರಮೇಶ್ ಇನ್ನಷ್ಟು ಆಘಾತಕ್ಕೆ ಒಳಗಾಗಿದ್ದರು.

ಸುವರ್ಣ ತ್ರಿಭುಜ ಬೋಟನ್ನು ಹೊರತೆಗೆದರೆ ಸತ್ಯಾಂಶ ತಿಳಿಯಲಿದೆಯೇ?ಸುವರ್ಣ ತ್ರಿಭುಜ ಬೋಟನ್ನು ಹೊರತೆಗೆದರೆ ಸತ್ಯಾಂಶ ತಿಳಿಯಲಿದೆಯೇ?

ಸದಾ ಅಲೆಗಳ ಅಬ್ಬರದ ನಡುವೆ ಹೋರಾಡಿ ಮೀನುಗಾರಿಕೆ ನಡೆಸುವ ಮೀನುಗಾರರ ಕಣ್ಮರೆಯಿಂದ ಅವರ ಕುಟುಂಬ ಆಘಾತಗೊಂಡಿದೆ.

English summary
Ramesh brother of missing fishermen Chandar Shekhar committed suicide.He consumed poison over the disappearance of his brother Chandra Shekhar in Suvarna Thribhuja boat tragedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X