ಮಂಗಳೂರು; ಮತ್ತೆ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ದುಷ್ಕರ್ಮಿಗಳು

ಮಂಗಳೂರು, ಫೆಬ್ರವರಿ 25: ದೇವಾಲಯದ ಪರಿಸರವನ್ನು ಅಪವಿತ್ರಗೊಳಿಸು ಕೃತ್ಯಗಳು ಮಂಗಳೂರಿನಲ್ಲಿ ಮುಂದುವರೆದಿದೆ. ಬಬ್ಬುಸ್ವಾಮಿ ದೇವಾಲಯದ ಮುಂದಿನ ಕಾಣಿಕೆ ಹುಂಡಿ ಹಣ ಕದ್ದು, ಅಪವಿತ್ರಗೊಳಿಸಿದ ಘಟನೆ ನಡೆದಿದೆ.

ದಡ್ಡಲ್ ಕಾಡ್ ಎಂಬಲ್ಲಿರುವ ಕೋಟೆದ ಬಬ್ಬುಸ್ವಾಮಿ ದೇವಾಲಯದ ಮುಂದಿನ ಕಾಣಿಕೆ ಹುಂಡಿಯನ್ನು ಬುಧವಾರ ರಾತ್ರಿ ಕಳವು ಮಾಡಲಾಗಿದೆ. ಬಳಿಕ ಅದಕ್ಕೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಲಾಗಿದೆ.

ವಿಗ್ರಹಾರಾಧನೆ, ದೇವರ ಶಕ್ತಿಯನ್ನು ನಿಂದಿರುವ ಬರಹವಿರುವ ಚೀಟಿಗಳನ್ನು ದುಷ್ಕರ್ಮಿಗಳು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಗುರುವಾರ ಬೆಳಗ್ಗೆ ಸ್ಥಳೀಯರು ಇದನ್ನು ಗಮನಿಸಿದ್ದು, ಉರ್ವ ಪೊಲೀಸರ ಗಮನಕ್ಕೆ ತಂದರು.

Kanike Hundi

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಸಹ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಜೊತೆ ಚರ್ಚೆ ನಡೆಸಿದರು.

ಮಂಗಳೂರಿನಲ್ಲಿ ಇಂತಹ ಕೃತ್ಯ ಇದೇ ಮೊದಲಲ್ಲ. ಕೊಟ್ಟಾರದ ಬಬ್ಬುಸ್ವಾಮಿ, ಅತ್ತಾವರದ ಕೊರಗಜ್ಜನ ಕಟ್ಟೆಯಲ್ಲಿ ಕಾಣಿಕೆ ಹುಂಡಿಗಳನ್ನು ಅಪವಿತ್ರಗೊಳಿಸಿದ ಪ್ರಕರಣಗಳು ಹಿಂದೆ ನಡೆಸಿದ್ದವು. ಇಂಹತ 4ನೇ ಪ್ರಕರಣವಿದಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+