ಮಂಗಳೂರು: ಗೂಗಲ್ ಮ್ಯಾಪ್‌ನಲ್ಲಿ ಮಂಗಳಾದೇವಿ ದೇವಳದ ಹೆಸರು ತಿರುಚಿದ ಕಿಡಿಗೇಡಿಗಳು, ಭಕ್ತರ ಪರದಾಟ
ಮಂಗಳೂರು, ಡಿಸೆಂಬರ್ 14: ಮಂಗಳೂರು ನಗರದ ಸಾವಿರಾರು ವರ್ಷದ ಇತಿಹಾಸವುಳ್ಳ ಶ್ರೀಮಂಗಳಾದೇವಿ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಶನ್‌ಅನ್ನು ತಿರುಚಿ ಕಿಡಿಗೇಡಿತನ ಪ್ರದರ್ಶಿಸಲಾಗಿದೆ.
ಲೊಕೇಶನ್‌ನಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಹೆಸರು ಇರುವ ಜಾಗದ ಹೆಸರನ್ನು ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಎಂದು ಬದಲಿಸಲಾಗಿದೆ. ಈ ಹೆಸರಿನ ಕಂಪೌಂಡ್ ದೇವಸ್ಥಾನ ಇರುವ ಮೂರು ಬಿಲ್ಡಿಂಗ್‌ನ ಆಚೆ ಅಂದರೆ ದೇವಸ್ಥಾನದಿಂದ 200 ಮೀಟರ್ ದೂರದಲ್ಲಿದೆ ಎಂದು ತಿಳಿದು ಬಂದಿದೆ.

ಇದೀಗ ಕಿಡಿಗೇಡಿಗಳ ವಿರುದ್ಧ ದೇಗುಲದ ಆಡಳಿತ ಮಂಡಳಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಸೈಬರ್ ಕ್ರೈಮ್‌ಗೂ ದೂರು ನೀಡಿದ್ದಾರೆ. ಈ ಬದಲಾವಣೆ ಕ್ಷೇತ್ರದ ಆಡಳಿತ ಮಂಡಳಿಯವರ ಗಮನಕ್ಕೆ ಬಂದಿದ್ದು, ತಕ್ಷಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಮತ್ತೆ ಲೊಕೇಶನ್ ಹೆಸರು ಮಂಗಳಾದೇವಿ ಎಂದೇ ಆಗಿದೆ. ಒಂದು ದಿನದಲ್ಲಿ ಏಕೆ ಈ ರೀತಿಯ ಬದಲಾವಣೆ ಆಗಿದೆ ಎಂದು ತಿಳಿದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವರಾತ್ರಿ ಸಂದರ್ಭ ಮಂಗಳಾದೇವಿ ದೇವಸ್ಥಾನದಲ್ಲಿ ಸಂತೆ ವ್ಯಾಪಾರದ ವಿಚಾರದಲ್ಲಿ ನಡೆದ ಧರ್ಮ ದಂಗಲ್ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೇ ಕಾರಣಕ್ಕೆ ಟಾರ್ಗೆಟ್ ಮಾಡಲಾಗಿದೆಯೇ ಎಂಬ ಅನುಮಾನ ಹುಟ್ಟಿದೆ. ಈ ಹಿಂದೆ ಇದೇ ರೀತಿ ಬಪ್ಪನಾಡು ದೇವಸ್ಥಾನದ ಹೆಸರನ್ನೂ ಗೂಗಲ್ ಲೊಕೇಶನ್‌ನಲ್ಲಿ ಬದಲಾಯಿಸಲಾಗಿತ್ತು. ಮಂಗಳಾದೇವಿಯ ಗೂಗಲ್ ಮ್ಯಾಪ್‌ನಲ್ಲಿ ಲೊಕೇಶನ್ ಬದಲಾವಣೆ ಆಗಿದ್ದರಿಂದ ದೂರದಿಂದ ಬಂದವರು ಪರದಾಡುವಂತಾಯಿತು.

ಯು.ಟಿ.ಖಾದರ್ ವಿರುದ್ಧ ಅವಹೇಳನ ಆರೋಪ - ಎಸ್‌ಡಿಪಿಐ ಮುಖಂಡ ಅರೆಸ್ಟ್
ಸಾವರ್ಕರ್ ಫೋಟೋ ವಿಚಾರದಲ್ಲಿ ಫೇಸ್‌ಬುಕ್‌ನಲ್ಲಿ ವಿಧಾನಸಭೆಯ ಸ್ಪೀಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿರುವ ಎಸ್‌ಡಿಪಿಐ ಮುಖಂಡನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಎಸ್‌ಡಿಪಿಐ ಮುಖಂಡ ರಿಯಾಜ್ ಕಡಂಬು ಬಂಧಿತ ಆರೋಪಿ.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಮಾಡಬೇಕೆಂಬ ವಿಚಾರ ಕೇಳಿ ಬಂದಿತ್ತು. ಫೋಟೋ ತೆರವು ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿದ್ದ ಸ್ಪೀಕರ್ ಅವರು, 'ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ' ಎಂದಿದ್ದರು. ಆದ್ದರಿಂದ ಫೇಸ್‌ಬುಕ್‌ನಲ್ಲಿ ಖಾದರ್ ವಿರುದ್ಧ ರಿಯಾಜ್ ಕಡಂಬು ಪೋಸ್ಟ್ ಹಾಕಿದ್ದ.

'ಇಷ್ಟೇ... ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್‌ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ. ಈ ವ್ಯಕ್ತಿಯಿಂದ ಆರ್‌ಎಸ್‌ಎಸ್ ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ. ಚುನಾವಣೆಯಲ್ಲಿ ಕೇಳುತ್ತಿದ್ರಲ್ಲ ಎಸ್‌ಡಿಪಿಐ ಯಾಕೆ ಒಬ್ಬ ಮುಸ್ಲಿಂ ಎಂಎಲ್‌ಎ ವಿರುದ್ಧ ಸ್ಪರ್ಧೆ ಮಾಡುವುದು ಅಂತ. ನೋಡಿ ಉತ್ತರ ಸ್ಪಷ್ಟವಿದೆ. ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ ಆರ್‌ಎಸ್‌ಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ.
ಎಂದಾದರೂ ಒಂದು ದಿನ ಎಸ್‌ಡಿಪಿಐ ಅದರೊಳಗೆ ಲಗ್ಗೆ ಇಟ್ಟರೆ, ಕಿತ್ತು ಬಿಸಾಕಿಯೇ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡ. ಈ ಸಭಾಧ್ಯಕ್ಷರಿಗೆ ಚಾಲೆಂಜ್ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ.
ಈ ರೀತಿ ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಪೋಸ್ಟ್ ಮಾಡಿದ್ದ ರಿಯಾಜ್ ಕಡಂಬುವನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಸದ್ಯ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ರಿಯಾಜ್ ಕಡಂಬು ವಿಚಾರಣೆ ನಡೆಯುತ್ತಿದೆ.












Click it and Unblock the Notifications