• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಸಿಬಿ ಯಂತ್ರ ಚಲಾಯಿಸಿ ಅಚ್ಚರಿಗೆ ಕಾರಣರಾದ ಸಚಿವ ಖಾದರ್

|

ಮಂಗಳೂರು, ಆಗಸ್ಟ್ 14 : ಮುಡಿಪು ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರದ ಶಾಸಕರೂ ಅಹಾರ ಸಚಿವರೂ ಆದ ಯು.ಟಿ. ಖಾದರ್ ಅವರು ಬಂದಿದ್ದರು.

ಫೇಸ್ ಬುಕ್ ನಲ್ಲಿ ಸಚಿವ ಖಾದರ್ ವಿರುದ್ಧ ಅವಹೇಳನಕಾರಿ ಕಾಮೆಂಟ್, ಬಂಧನ

ಸಚಿವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿ, ಅಲ್ಲಿದ್ದ ಮಾಧ್ಯಮದವರೊಂದಿಗೆ ಸಚಿವರಿಂದ ಸಂದೇಶ ನೀಡುವುದು ಅಲ್ಲಿನ ಕಾರ್ಯಕರ್ತರ ಪ್ಲಾನ್ ಅಗಿತ್ತು. ಅದರೆ ಸಚಿವರು ಮಾಡಿದ್ದೇ ಬೇರೆ!

ಸಚಿವರೇ ಜೆಸಿಬಿ ಯಂತ್ರ ಹತ್ತಿ ಸ್ವತಃ ತಾವೇ ಜೆ.ಸಿ.ಬಿ ವಾಹನ ಚಲಾಯಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಅಲ್ಲಿ ನೆರೆದಿದ್ದ ಜನರು ತಮ್ಮ ಶಾಸಕರ ಸರಳತೆಯನ್ನು ಕಂಡು ಖುಷಿಪಟ್ಟರು.

ಕಳಂಕರಹಿತ ಸರಕಾರಕ್ಕೆ ಮಸಿ ಬಳಿಯಲು ಕೇಂದ್ರ ಯತ್ನ: ಖಾದರ್

ದೂರದಿಂದ ಸಚಿವರ ಮುಖ ಪರಿಚಯ ಸ್ಪಷ್ಟವಾಗಿ ತಿಳಿಯದ ವ್ಯಕ್ತಿಯೊಬ್ಬರು, "ಇದೇನು? ಜೆ.ಸಿ.ಬಿ ವಾಹನ ಡ್ರೈವರ್ ಇಷ್ಟು ಟಿಪ್ ಟಾಪ್ ಆಗಿದ್ದಾರೆ ಅಲ್ವಾ?" ಎಂದು ಹೇಳಿದ್ದನ್ನು ಕಂಡು ಮತ್ತೊಬ್ಬರು ಹೇಳಿದರು: "ಅದು ಜೆ.ಸಿ.ಬಿ ಡ್ರೈವರ್ ಅಲ್ಲ, ನಮ್ಮ ಮಿನಿಸ್ಟರ್ ಖಾದರ್ ಸಾಹೇಬ್ರು".

ಯು.ಟಿ‌. ಖಾದರ್ ಅವರ ಸರಳತೆ ಇದೇ ಮೊದಲೇನಲ್ಲ. ಹಿಂದೆಯೂ ಹಲವು ಈ ರೀತಿಯ ಘಟನೆಗಳಿಗೆ ಸಚಿವರು ಉದಾಹರಣೆಯಾಗಿದ್ದರು. ರಾಜ್ಯದ ಸಚಿವರೊಬ್ಬರು ಜೆಸಿಬಿ ಯಂತ್ರ ವಾಹನ ಹತ್ತಿ ಕಾಮಗಾರಿಗೆ ಚಾಲನೆ ನೀಡಿದ್ದು ಅಚ್ಚರಿಗೆ ಕಾರಣವಾಯಿತು.

English summary
In An eye catching incident Minister U T Khader could be seen as JCB vehicle driver during the road repair project at Mudipu, Mangaluru on Aug 14. Khader driving JCB has now become the talk of the town and viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X