ಮಂಗಳೂರಿನ ಬಿಜೈನಲ್ಲಿ ಇಂಜಿನಿಯರ್ ಭೀಕರ ಹತ್ಯೆ
ಮಂಗಳೂರು, ಸೆ.21 : ಬಿಜೈನಲ್ಲಿ ಮೆಸ್ಕಾಂನ ಕಾರ್ಯಕಾರಿ ಇಂಜಿನಿಯರೊಬ್ಬರನ್ನು ದುಷ್ಕರ್ಮಿಗಳು ಭಾನುವಾರ ಮುಂಜಾನೆ ಬರ್ಬರವಾಗಿ ಹತ್ಯೆಗೈಯಲಾಗಿದೆ. ಕೊಲೆ ಬಗ್ಗೆ ಅನೇಕ ಅನುಮಾನಗಳು ಮೂಡುತ್ತಿದ್ದು, ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
ಮೆಸ್ಕಾಂ ಕಾರ್ಪೋರೇಟ್ ಕಜೇರಿಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ 55 ವರ್ಷದ ಜಗದೀಶ್ ರಾವ್ ಎಂಬುವರೇ ಹತ್ಯೆಯಾದ ವ್ಯಕ್ತಿ. ಶನಿವಾರ ತಡರಾತ್ರಿ 2.30 ರ ವೇಳೆಗೆ ಗಾಢ ನಿದ್ದೆಯಲ್ಲಿದ್ದಾಗ ಮನೆಗೆ ನುಗ್ಗಿದ ದುಷ್ಕರ್ಮಿಗಳು ಜಗದೀಶ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನು ಕಂಡು ಭಯಗೊಂಡ ಅವರ ಪತ್ನಿಯ ಅರಚಾಟ ಕೇಳಿ ಪಕ್ಕದ ಮನೆಯವರು ನೆರವಿಗೆ ಬಂದಿದ್ದಾರೆ.ಕೂಡಲೇ ನೆರಮನೆವರ ನೆರವಿನಿಂದ ಜಗದೀಶ್ ಅವರನ್ನು ಆಸ್ಪತ್ರಗೆ ಸಾಗಿಸಲು ಪ್ರಯತ್ನಿಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಜಗದೀಶ್ ಅವರಿಗೆ ಕಚೇರಿ ಹಾಗೂ ಮನೆಯ ಸುತ್ತಾ ಮುತ್ತಾ ಒಳ್ಳೆ ಹೆಸರಿದ್ದು, ಯಾರು ಶತ್ರುಗಳಿಲ್ಲ ಎಂದು ತಿಳಿದು ಬಂದಿದೆ.

ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ
ಘಟನೆ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕದ್ರಿ ಠಾಣೆ ಪೊಲೀಸರು ಪಂಚನಾಮೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಮೆಸ್ಕಾಂ ಗುತ್ತಿಗೆದಾರರ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದಿದ್ದಾರೆ.

ಅನೇಕ ಅನುಮಾನಗಳು ಮೂಡುತ್ತಿವೆ
ಈ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿದ್ದು ಹೇಗೆ? ಟೆರೆಸ್ ಮೂಲಕ ಒಳಗೆ ಬಂದರೂ ಟೆರೆಸ್ ಬಾಗಿಲು ತೆರೆದವರು ಯಾರು? ಟೆರೆಸ್ ಮೂಲಕವೇ ಹೋಗಿದ್ದು ಏಕೆ? ಮನೆಯ ಮುಖ್ಯದ್ವಾರದಿಂದ ಹೋಗಬಹುದಿತ್ತಲ್ಲ? ಮುಂತಾದ ಪ್ರಶ್ನೆಗಳು ಎದ್ದಿವೆ

ವೈಯಕ್ತಿಕ ದ್ವೇಷದಿಂದ ನಡೆದಿಲ್ಲ
ಶವದ ಮರಣೋತ್ತರ ಪರೀಕ್ಷೆ ವೆನ್ ಲಾಕ್ ಆಸ್ಪತ್ರೆಯಲ್ಲಿ ನಡೆಯಲಿದೆ. ಪರೀಕ್ಷೆ ವರದಿ ಬಂದ ಮೇಲೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಮೇಲ್ನೋಟಕ್ಕೆ ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದ್ದಂತೆ ಕಾಣುತ್ತಿಲ್ಲ. ಮನೆಯಿಂದ ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿಲ್ಲ ಎಂದು ಯ್ತಿಳಿದು ಬಂದಿದೆ.

ಕಳ್ಳರನ್ನು ಚೇಸ್ ಮಾಡಿದ ನೆರಮನೆಯಾತ
ಜಗದೀಶ್ ಅವರ ಪತ್ನಿ ಭಾರತಿ ಅವರು ರಕ್ತದ ಮಡುವಿನಲ್ಲಿ ಜಗದೀಶ್ ಬಿದ್ದಿದ್ದಾಗ ಕೂಗಿಕೊಂಡಿದ್ದಾರೆ. ನೆರೆಮನೆಯವರು ಟೆರೇಸ್ ಮೇಲಿಂದ ಹಾರುತ್ತಿದ್ದ ಕಳ್ಳರನ್ನು ನೋಡಿ ನೆರಮನೆಯವರು ಚೇಸ್ ಮಾಡಿ ಹಿಡಿಯಲು ಯತ್ನಿಸಿದ್ದಾರೆ ಗಾಳಿಯಲ್ಲಿ ಗುಂಡು ಹಾರಿಸಿದರು ಎನ್ನಲಾಗಿದೆ. ಆದರೆ, ಕಳ್ಳರು ಪರಾರಿಯಾಗಿದ್ದಾರೆ. 1 ಚಿನ್ನದ ಸರ ಹಾಗೂ 1 ಲಕ್ಷ ರು ಕಳ್ಳತನವಾಗಿದೆ ಎಂಬ ಸುದ್ದಿಯೂ ಇದೆ.












Click it and Unblock the Notifications