'ಅಮ್ಮಾ' ಎಂದು ಬೊಗಳುವ ನಾಯಿಯನ್ನು ಬಲ್ಲಿರಾ?
ಉಡುಪಿ, ಸೆಪ್ಟೆಂಬರ್ 22 : ಮಕ್ಕಳು ಅಕ್ಕರೆಯಿಂದ ಅಮ್ಮನನ್ನು ಅಮ್ಮಾ ಎಂದು ಕರೆದರೆ ಅಚ್ಚರಿಯಿಲ್ಲ, ಆದರೆ ಮೂಕಪ್ರಾಣಿ ನಾಯಿ ತನ್ನ ಮನೆಯೊಡತಿಯನ್ನು 'ಅಮ್ಮಾ' ಎಂದು ಕರೆದರೆ ನಿಮಗೆ ಅಚ್ಚರಿಯಾಗದಿರುವುದೇ?
ಹೌದು ಇಂಥ ಅಚ್ಚರಿಗೆ ಸಾಕ್ಷಿಯಾಗಿದೆ ಸಾಕು ನಾಯಿ. ಮಣಿಪಾಲದಲ್ಲಿ ನೆಲೆಸಿರುವ ಬ್ಯಾಂಕ್ ಉದ್ಯೋಗಿ ಸುಬ್ರಹ್ಮಣ್ಯ ಅವರ ಮನೆಯಲ್ಲಿರುವ ನಾಯಿ ಅವರ ಪತ್ನಿಯನ್ನು ಮಕ್ಕಳು ಕರೆಯುವಂತೆ ಅಕ್ಕರೆಯಿಂದ 'ಅಮ್ಮಾ' ಎಂದು ಕರೆಯುತ್ತಿದೆಯಂತೆ. [ಶರ್ಮಿಳಾಗೆ ಸಾಕುನಾಯಿ ಕಚ್ಚಿದ್ದೇಕೆ?]

ನಾಲ್ಕು ವರ್ಷದ ಈ ನಾಯಿ ಮಕ್ಕಳಂತೆಯೇ ಅಮ್ಮಾ ಎಂದು ಕರೆಯುವುದನ್ನು ಕೇಳಿ ಸ್ವತ: ಸುಬ್ರಹ್ಮಣ್ಯ ಅವರಿಗೇ ಸೋಜಿಗವಂತೆ. ಈಗ ಆ ನಾಯಿ ಅಮ್ಮಾ ಎಂದು ಕರೆಯುವುದು ತೀರಾ ಸಹಜವಾಗಿದ್ದು ಮಕ್ಕಳು ಮನೆಯಲ್ಲಿ ಅಮ್ಮಾ ಎಂದು ಕರೆಯುವುದನ್ನು ಕೇಳಿಸಿಕೊಂಡು ಅನುಕರಣೆ ಮಾಡಿ ತಾನೂ ಹಾಗೆಯೇ ಅಮ್ಮಾ ಎಂದು ಕರೆಯುತ್ತಿದೆ ಎನ್ನುತ್ತಾರೆ ಸುಬ್ರಹ್ಮಣ್ಯ ಅವರು. [ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ!]
ಈಗ ನಾಯಿ ಮಕ್ಕಳಂತೆ ಮನೆಯೊಡತಿಯನ್ನು 'ಅಮ್ಮಾ' ಎಂದು ಕರೆಯುತ್ತಿರುವುದನ್ನು ತಮ್ಮ ಕಿವಿಗಳಿಂದ ಕೇಳಲು ಸುತ್ತಮುತ್ತಲಿನ ಜನರು ದೌಡಾಯಿಸಿ ಬರುತ್ತಿದ್ದಾರಂತೆ. ಈಗ ಈ ನಾಯಿ ಅದೆಷ್ಟು ಫೇಮಸ್ ಎಂದರೆ ಅಮ್ಮಾ ಎಂದು ಕರೆಯುವ ನಾಯಿಯನ್ನು ಒಮ್ಮೆ ನೋಡಿ ಬರೋಣ ಎಂದು ಜನ ಮುಗಿಬೀಳುತ್ತಿದ್ದಾರೆ. ಮಣಿಪಾಲದ ಸುತ್ತಾಮುತ್ತಾ ಈಗ ಅಮ್ಮಾ ನಾಯಿಯದೇ ಸುದ್ದಿ. [ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನ]











Click it and Unblock the Notifications