ಮಂಗಳೂರಿನ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಓಡಾಡಲು ಅಡ್ಡಿಯಿಲ್ಲ
ಮಂಗಳೂರು, ಅಕ್ಟೋಬರ್, 03: ನಗರದ ಸೌತ್ ಕೆನರಾ ಜಿಲ್ಲಾ ಕೋಆಪರೇಟಿವ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಸೊಸೈಟಿ ಅಕ್ಟೋಬರ್ 2ರ ಗಾಂಧಿ ಜಯಂತಿ ಅಂಗವಾಗಿ ನಗರದ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾಕಾರ್ಯ ಯಶಸ್ವಿಯಾಗಿ ನೆರವೇರಿದೆ.
ನಗರದ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಆರಂಭಿಸಿದ್ದ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ರೈಲ್ವೇ ಸೀನಿಯರ್ ಎಂಜಿನಿಯರ್ ರಾಜ್ ಗೋಪಾಲ್, ಕೋ ಆಪರೇಟಿವ್ ಆಸ್ಪತ್ರೆಯ ಅಧ್ಯಕ್ಷ ಹರಿದಾಸ್, ಉಪಾಧ್ಯಕ್ಷ ಮಾಧವ ಸುವರ್ಣ ಹಾಗೂ ನಿರ್ದೇಶಕರಾದ ಯಶವಂತ ಮರೋಳಿ ಮುಂತಾದ ಗಣ್ಯರು ಚಾಲನೆ ನೀಡಿದರು.[ಗಾಂಧೀಜಿ ಅವರ ಕನಸು ಕರ್ನಾಟಕದಲ್ಲಿ ನನಸು]

ಸ್ವಚ್ಛತಾ ಕಾರ್ಯಕ್ಕೆ ದಕ್ಷಿಣ ರೈಲ್ವೇ ಪಾಲ್ಘಾಟ್ ಡಿವಿಜನ್ ಸದಸ್ಯರು, ಅಧಿಕಾರಿಗಳು ಕೂಡ ಸಂಪೂರ್ಣ ಸಹಕಾರ ನೀಡಿದ್ದು ಇವರ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾದರು.
ಸ್ವಚ್ಛತಾ ಕಾರ್ಯ ಸಂದರ್ಭದಲ್ಲಿ ಬಹಳ ಶ್ರದ್ಧೆಯಿಂದ ಭಾಗವಹಿಸಿದ ಸೌತ್ ಕೆನರಾ ಜಿಲ್ಲಾ ಕೋ-ಆಪರೇಟಿವ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಸೊಸೈಟಿ ಸದಸ್ಯರು ಜನರಲ್ಲಿ ಸ್ವಚ್ಛತೆಯ ಕಡೆ ಅರಿವು ಮೂಡಿಸಿದರು. ತಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.












Click it and Unblock the Notifications