ಮಂಗಳೂರು : ಖ್ಯಾತ ಉದ್ಯಮಿ ರಘುನಾಥ ಶೇಟ್ ವಿಧಿವಶ

ಮಂಗಳೂರು, ಏ. 7 : ಮಂಗಳೂರು ನಗರದ ಪ್ರಸಿದ್ಧ ಉದ್ಯಮಿ ಮತ್ತು ಸಮಾಜ ಸೇವಕ ಎಂ.ರಘುನಾಥ ಶೇಟ್ ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಮಾಲೀಕರಾದ ಎಂ.ರಘುನಾಥ್ ಶೇಟ್ (72) ಅವರು ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಅವರನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

M. Raghunath Shet

ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಅನ್ನು 1947ರಲ್ಲಿ ಸುಬ್ರಾಯ ಲಕ್ಷಣ್ ಶೇಟ್ ಸ್ಥಾಪಿಸಿದ್ದರು. ಇವರ ಹಿರಿಯ ಮಗ ಎಂ.ರಘುನಾಥ್ ಶೇಟ್ 1965ರಿಂದ ಉದ್ಯಮ ನೋಡಿಕೊಳ್ಳಲು ಆರಂಭಿಸಿದರು. 1984ರಲ್ಲಿ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ಅನ್ನು ಆರಂಭಿಸಿದ್ದರು. [ಮಂಗಳೂರಿಗೆ ಬರಲಿದೆ ವಿಶ್ವದರ್ಜೆ ಕೌಶಲ್ಯ ಅಭಿವೃದ್ಧಿ ಕೇಂದ್ರ]

ಕೇವಲ ಉದ್ಯಮಕ್ಕೆ ಮಾತ್ರ ಸೀಮಿತವಾಗದ ರಘುನಾಥ್ ಶೇಟ್ ಅವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿ ಮತ್ತು ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

30 ಲಕ್ಷದ ಮುಖವಾಡ ಕೊಟ್ಟಿದ್ದರು : 2010ರ ಅಕ್ಟೋಬರ್‌ನಲ್ಲಿ ರಘುನಾಥ್ ಶೇಟ್ ಅವರು ಮಂಗಳಾದೇವಿ ದೇವಾಲಯಕ್ಕೆ 2.5 ಕೆಜಿ ತೂಕದ ಚಿನ್ನದ ಮುಖವಾಡವನ್ನು ನೀಡಿದ್ದರು. ದೇವಾಲಯದ ಬೆಳ್ಳಿಯ ಬಾಗಿಲು ನಿರ್ಮಾಣಕ್ಕೂ 40 ಕೆಜಿ ಬೆಳ್ಳಿಯನ್ನು ಶೇಟ್ ದಾನವಾಗಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+