ರಫೀಕ್ ಕೊಲೆಗೆ 18 ದಿನಗಳ ಹಿಂದೆಯೇ ನಡೆದಿತ್ತಾ ಮಾಸ್ಟರ್ ಪ್ಲಾನ್?
ಮಂಗಳೂರು, ಫೆಬ್ರವರಿ. 21 : ಸಿನಿಮೀಯ ಶೈಲಿಯಲ್ಲಿ ಫೆಬ್ರವರಿ 15 ರಂದು ನಡೆದ ರಫೀಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರ್ ಅಲಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಟ್ಲ ನಿವಾಸಿ ಸಾದಿಕ್ ಬಂಧಿತ ಆರೋಪಿ. ಮೃತ ರಫೀಕ್ ಜತೆ ಇದ್ದವರೇ ಮಾಸ್ಟರ್ ಪ್ಲಾನ್ ಮಾಡಿ ಈ ಹತ್ಯೆ ಮಾಡಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.[ಕಾಲಿಯಾ ರಫೀಕ್ ನ ಕೊಲ್ಲಿಸಿದ್ದು ನಾನೇ ಎಂದ ದುಬೈನಲ್ಲಿರುವ ಜಿಯಾ]
ಪುಣೆಗೆ ಹೋಗಿ ಬರುವುದಾಗಿ ನಜೀಬ್ ಎಂಬಾತ ಮತ್ತು ಇತರೆ ಇಬ್ಬರು ಗೆಳೆಯರು ಸೇರಿ ರಿಟ್ಜ್ ಕಾರನ್ನು ಬಾಡಿಗೆ ಪಡೆದು ರಫೀಕ್ ನನ್ನು ಕರೆದುಕೊಂಡು ಕೋಟೆ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಬಳಿಕ ಟಿಪ್ಪರ್ ಲಾರಿಯಲ್ಲಿದ್ದ ತಂಡವೊಂದು ರಫಿಕ್ ನನ್ನು ಅಟ್ಟಾಡಿಸಿಕೊಂಡು ಹೋಗಿ ತಲವಾರಿನಿಂದ ಇರಿದು ಕೊಲೆ ಮಾಡಿದ್ದಾರೆ.
ರಫೀಕ್ ನನ್ನು ಹತ್ಯೆ ನಡೆಸುವ 18 ದಿನಗಳ ಹಿಂದೆಯಷ್ಟೇ ಈ ಕಾರನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ಇದು ಮುಂಚಿವಾಗಿಯೇ ಪ್ಲಾನ್ ಮಾಡಿ ಈ ರೀತಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.[ನಟೋರಿಯಸ್ ರೌಡಿ ಕಾಳಿಯಾ ರಫೀಕ್ ಕೊಲೆ ಹಿಂದಿನ ಮರ್ಮವೇನು ?]
ನಜೀಬ್ ಈಗಾಗಲೇ ಅನೇಕ ಕಳವು ಪ್ರಕರಣಗಳ ಆರೋಪಿಯಾಗಿದ್ದು ತಿಳಿದುಬಂದಿದೆ. ನಜೀಬ್ ಜೊತೆಗೆ ಫಿರೋಜ್ ಎಂಬಾತ ಕೂಡಾ ಈ ತಂಡದಲ್ಲಿದ್ದು, ಇದೀಗ ಇವರಿಬ್ಬರೂ ನಾಪತ್ತೆಯಾಗಿದ್ದಾರೆ.
ಆರೋಪಿಗಳು ಬಳಸಿದ್ದ ಕಾರು ಬೇಕಲದ ಚೆಂಬರಿಕ ನಿವಾಸಿ ಸೇರಿದ್ದು ಎಂದು ಖಚಿತವಾಗಿದೆ. ಇದೀಗ ತನಿಖಾ ತಂಡದ ಪೊಲೀಸರು ಕಾರನ್ನು ವಶಕ್ಕೆ ವಶಕ್ಕೆ ಪಡೆದುಕೊಂಡು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಕಾಸರಗೋಡು ಉಪ್ಪಳ ನಿವಾಸಿ ನಟೋರಿಯಸ್ ರೌಡಿ ಕಾಳಿಯಾ ರಫೀಕ್ ನನ್ನು ದುಷ್ಕರ್ಮಿಗಳ ಗುಂಪೊಂದು ಫೆಬ್ರವರಿ 15 ರಂದು ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿತ್ತು. ಅಟ್ಟಾಡಿಸಿ ತಲಾವರಿನಲ್ಲಿ ಕೊಂದು ಪರಾರಿಯಾಗಿತ್ತು.












Click it and Unblock the Notifications