ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಹಿಂದೂ ಸಂಘಟನೆಗಳಿಂದ ಗುರುಪುರ ಬಂದ್

|
Google Oneindia Kannada News

ಮಂಗಳೂರು, ಡಿ.8 : ಉಲಾಯಿಬೆಟ್ಟುವಿನ ಬಳಿ ದತ್ತಮಾಲಾಧಾರಿಗಳ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಭಜರಂಗದಳದ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಸೋಮವಾರ ಗುರುಪುರ ಬಂದ್‌ಗೆ ಕರೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗುರುಪುರ, ಉಳಾಯಿಬೆಟ್ಟು ಮತ್ತು ಸುತ್ತಲ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಗುರುಪುರ, ಉಳಾಯಿಬೆಟ್ಟು ,ಬಜ್ಪೆ, ವಾಮಂಜೂರು ಮತ್ತು ಸುತ್ತಲಿನ ಪರಿಸರದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಸೋಮವಾರ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 144 ಸೆಕ್ಷನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. [ದತ್ತಮಾಲಾಧಾರಿಗಳ ಮೇಲೆ ಹಲ್ಲೆ]

ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ವಿಎಚ್‌ಪಿ ಮುಖಂಡ ಜಗದೀಶ್, ಸತ್ಯಜಿತ್ ಸುರತ್ಕಲ್, ಪ್ರಸಾದ್ ಅತ್ತಾವರ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

ಪೊಲೀಸರ ಬಂದೋಬಸ್ತ್ ನಡುವೆಯೇ ಕೆಲವರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮೂರು ವಾಹನಗಳು ಜಖಂಗೊಂಡಿವೆ. ಕೆಎಸ್ಆರ್‌ಟಿಸಿಯ ರಾಜಹಂಸ ಬಸ್‌ ಬಸ್ಸಿಗೆ ಕೆಲವರು ಕಲ್ಲು ತೂರಿದ್ದಾರೆ.

ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಖಾಸಗಿ ಬಸ್ಸುಗಳು ಬಂದ್‌ಗೆ ಬೆಂಬಲ ನೀಡಿದ್ದು, ಸಂಚಾರವನ್ನು ಸ್ಥಗಿತಗೊಳಿಸಿವೆ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ.

Bandh

English summary
Hundreds of activists of VHP, Bajrang Dal and other pro-Hindu organizations gathered at Gurpur, Mangaluru on Monday December 8 and took out a rally to protest against the attack on Datta Peetha pilgrims on the night of Dec 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X