ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಡಾ.ಸಲ್ಮಾ ಸುಹಾನಾ ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಶಸ್ತಿಗೆ ಆಯ್ಕೆ

|
Google Oneindia Kannada News

ಮಂಗಳೂರು, ಜನವರಿ 11: ಮಂಗಳೂರು ಮೂಲದ ವೈದ್ಯೆ ಡಾ.ಸಲ್ಮಾ ಸುಹಾನಾ ಅವರು ಅಮೆರಿಕನ್‌ ಅಕಾಡೆಮಿ ಆಫ್‌ ನ್ಯೂರಾಲಜಿ ಸಂಸ್ಥೆಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಕಾಲರ್‌ಶಿಪ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ದಾವಣಗೆರೆಯ ಎಸ್‌ಎಸ್‌ಐಎಂಎಸ್ ಆಂಡ್‌ ಆರ್‌ಸಿ ವೈದ್ಯಕೀಯ ಕಾಲೇಜಿನಲ್ಲಿ ನ್ಯೂರಾಲಜಿ "ಸೂಪರ್‌ ಸ್ಪೆಷಾಲಿಟಿ' ಕುರಿತು ವ್ಯಾಸಂಗ ಮಾಡುತ್ತಿದ್ದಾರೆ.

ಶ್ರೀನಿವಾಸ ಮಲ್ಯ ಸ್ಮಾರಕ ಜೀವಮಾನ ಸಾಧನೆ ಪ್ರಶಸ್ತಿಗೆ ಡಾ.ಬಿ.ಎಂ. ಹೆಗ್ಡೆ ಆಯ್ಕೆಶ್ರೀನಿವಾಸ ಮಲ್ಯ ಸ್ಮಾರಕ ಜೀವಮಾನ ಸಾಧನೆ ಪ್ರಶಸ್ತಿಗೆ ಡಾ.ಬಿ.ಎಂ. ಹೆಗ್ಡೆ ಆಯ್ಕೆ

ಅಕಾಡೆಮಿಯು ಡಾ.ಸಲ್ಮಾ ಸುಹಾನಾರ 'ಸೆರೆಬ್ರಲ್ ವೀನಸ್ ಥ್ರೊಂಬೋಸಿಸ್' ಕುರಿತ ಅಧ್ಯಯನವನ್ನು ಗುರುತಿಸಿ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಜಾಗತಿಕ ನರರೋಗ ತಜ್ಞರ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದೆ.

 ಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯ ಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯ

ಈ ಹಿಂದೆ ಸಲ್ಮಾ ಸುಹಾನಾ ಅವರು ಮಂಗಳೂರಿನ ಫಾದರ್‌ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿಯೆಂದು ಪರಿಗಣಿಸಲ್ಪಟ್ಟು ಚಿನ್ನದ ಪದಕ ಪಡೆದಿದ್ದರು.

Mangaluru doctor selected for American Academy of Neurology Award

ಅಷ್ಟೇ ಅಲ್ಲ, ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಎಂಬಿಬಿಎಸ್ ಪದವಿ, ಬೆಂಗಳೂರಿನ ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್ ನಲ್ಲಿ ಜನರಲ್‌ ಮೆಡಿಸಿನ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

 ರಷ್ಯಾದ ಮೌಂಟ್ ಎಲ್‌ಬ್ರಸ್ ನಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ಕುವರಿ ಭವಾನಿ ರಷ್ಯಾದ ಮೌಂಟ್ ಎಲ್‌ಬ್ರಸ್ ನಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ಕುವರಿ ಭವಾನಿ

ಡಾ ಸಲ್ಮಾ ಅವರು ಸೌದಿ ಅರೇಬಿಯಾದ ಖಸಿಂ ಯುನಿವರ್ಸಿಟಿಯ ದಂತ ವೈದ್ಯಕೀಯ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್‌ ಆಗಿರುವ ಡಾ ಶಕಿಲ್ ಎಂ. ಅವರ ಪತ್ನಿ ಹಾಗೂ ನಿವೃತ್ತ ಡೆಪ್ಯುಟಿ ಡೈರೆಕ್ಟರ್‌ ಖಾಲಿದ್ ತಣ್ಣೀರುಬಾವಿ ಅವರ ಪುತ್ರಿ.

English summary
Mangaluru Based doctor Dr.Salma Suhana selected for prestigious American Academy of Neurology scholarship award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X