ಕಾರ್ಪೊರೇಷನ್ ಬ್ಯಾಂಕ್ ನಿವ್ವಳ ಲಾಭ 147 ಕೋಟಿ
ಮಂಗಳೂರು, ಫೆ. 10: ಕಾರ್ಪೊರೇಷನ್ ಬ್ಯಾಂಕ್ ತನ್ನ ಮೂರನೇ ತ್ರೈಮಾಸಿಕದ ಅಂತ್ಯದಲ್ಲಿ ಭರ್ಜರಿ ನಿವ್ವಳ ಲಾಭ ಗಳಿಸಿದೆ. ಒಟ್ಟು 3,27,655 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ ಬ್ಯಾಂಕ್ 147.21 ಕೋಟಿ ರೂ. ಲಾಭ ಗಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾಂಕ್ ಆಡಳಿತ ನಿರ್ದೇಶಕ ಎಸ್.ಆರ್ ಬನ್ಸಾಲ್, ಬ್ಯಾಂಕ್ 3 ತ್ರೈಮಾಸಿಕ ಅಂತ್ಯದಲ್ಲಿ 147.21 ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.[ಮಂಗಳೂರು : ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ವೇಗ]

ಎಟಿಎಂ ಟ್ರಾನ್ಸಾಕ್ಷನ್‍ನಲ್ಲಿ ಬ್ಯಾಂಕ್ ಶೇ. 50.20 ಪ್ರಗತಿ ದಾಖಲಿಸಿದೆ. ಪ್ರಧಾನಮಂತ್ರಿ ಜನಧನ ಯೋಜನೆಯನ್ನು ಗ್ರಾಮಾಂತರ ಪ್ರದೇಶದ ಜನರಿಗೆ ಬ್ಯಾಂಕ್ ತಲುಪಿಸಿದೆ. ಕಳೆದ ತ್ರೈಮಾಸಿಕ ಅವಧಿಗಿಂತ ಈ ಬಾರಿ ಬ್ಯಾಂಕ್ ಶೇ. 8.72 ನಚ್ಟು ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಡಿಪಾಸಿಟ್ ವಿಭಾಗದಲ್ಲಿ ಶೇ. 5.55, ನಿವ್ವಳ ಲಾಭಾಂಶದಲ್ಲಿ ಶೇ. 16.20 ಏರಿಕೆಯಾಗಿದೆ ಎಂದು ತಿಳಿಸಿದರು.[ದಕ್ಷಿಣ ಕನ್ನಡ ಜಿಲ್ಲೆ ಜನರ ಮನೆ ಬಾಗಿಲಿಗೆ ಆಡಳಿತ]
ಬ್ಯಾಂಕ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಎ.ಎಲ್ ದೌಲ್ತಾನಿ, ಬಿ.ಕೆ ಶ್ರೀವಾಸ್ತವ್, ಜನರಲ್ ಮ್ಯಾನೇಜರ್ ಸಿ.ಜಿ ಪಿಂಟೋ ಉಪಸ್ಥಿತರಿದ್ದರು.












Click it and Unblock the Notifications