ಮಂಗಳೂರು: ನವಜಾತ ಹೆಣ್ಣು ಶಿಶುವಿನ ಶವ ಪತ್ತೆ
ಮಂಗಳೂರು, ಜ, 18: ಸಮೀಪದ ಬೆಂದೂರ್ ವೆಲ್ ಪ್ರದೇಶದ ಕಲ್ಪನಾ ರಸ್ತೆಯ ಮನೆಯೊಂದರ ಬಾವಿಯಲ್ಲಿ ನವಜಾತ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ವೃದ್ಧರಿಬ್ಬರು ವಾಸಿಸುತ್ತಿರುವ ಮನೆಯ ಬಾವಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮನೆಯಲ್ಲಿ ವೃದ್ಧ ಮಹಿಳೆ ಮತ್ತು ಆಕೆಯ ಪತಿ ಮಾತ್ರ ವಾಸವಿದ್ದಾರೆ. ಬಾವಿಯ ನೀರನ್ನು ಎದುರು ಮನೆಯವರು ಕೂಡ ಬಳಸುತ್ತಿದ್ದರೆನ್ನಲಾಗಿದೆ.[ಜ.2ರಿಂದ ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು]

ಎರಡು ದಿನಗಳಿಂದಲೂ ಬಾವಿಯಿಂದ ವಾಸನೆ ಬರುವುದು ಎದುರಿನ ಮನೆಯ ಮಹಿಳೆಯ ಗಮನಕ್ಕೆ ಬಂದಿದ್ದು, ಶವ ಬಾವಿ ನೀರಿನಲ್ಲಿ ತೇಲುವುದು ಗೋಚರಿಸಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಗುವಿನ ಶವ ಮೇಲಕ್ಕೆತ್ತಲಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ತನಿಖೇಯ ನಂತರವಷ್ಟೇ ಇದಕ್ಕೆ ಕಾರಣ ತಿಳಿದು ಬರಬೇಕಿದ್ದು, ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವೋ ಅಥವಾ ಹೆಣ್ಣು ಎಂಬ ತಿರಸ್ಕಾರಕ್ಕೆ ತುತ್ತಾಗಿ ಜೀವ ಕಳೆದುಕೊಂಡ ಮಗುವೋ ಎಂಬುದು ಗೊತ್ತಾಗಲಿದೆ.












Click it and Unblock the Notifications