ಜೈಲು ಅಧೀಕ್ಷಕರ ಮೇಲೆಯೇ ಹಲ್ಲೆ ನಡೆಸಿದ ಕೈದಿಗಳು
ಮಂಗಳೂರು, ಮೇ 22 : ಜಿಲ್ಲೆಯ ಜೈಲು ಅಧೀಕ್ಷಕರ ಮೇಲೆ ಕೈದಿಗಳು ಹಲ್ಲೆ ನಡೆಸಿರುವುದು ಕೊಡಿಯಾಲ್ ಬೈಲಿನಲ್ಲಿರುವ ಸಬ್ ಜೈಲ್ ಆವರಣದಲ್ಲಿ ನಿನ್ನೆ ತಡರಾತ್ರಿ ಬೆಳಕಿಗೆ ಬಂದಿದೆ.
ಜೈಲಿನಲ್ಲಿರುವ ಕೈದಿಗಳ ಗುಂಪೊಂದು ಜೈಲು ಅಧೀಕ್ಷಕ ಪರಮೇಶ್ವರ್ ಸೇರಿದಂತೆ ರಮೇಶ್, ಹುಡಭಾಗ ಎಂಬ ಮೂವರು ಜೈಲು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದೆ. ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳಿಂದ ಈ ಕೃತ್ಯ ಎಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೈದಿಗಳು ಬಿಂದಿಗೆಯಿಂದ ಹಲ್ಲೆಗೈದಿರುವುದರಿಂದ ಜೈಲು ಅಧೀಕ್ಷಕರಿಗೆ, ಮೂವರೂ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖೈದಿಗಳು ಯಾವ ಉದ್ದೇಶಕ್ಕೆ ಜಗಳ ಶುರುಮಾಡಿದ್ದಾರೆ ಎಂಬುದು ಇನ್ನು ತಿಳಿದುಬಂದಿಲ್ಲ. ಆದರೆ ಅಧೀಕ್ಷಕರು ಮದ್ಯ ಸೇವಿಸಿ ಎ ಬ್ಯಾರೆಕ್ಗೆ ತೆರಳಿದ್ದರೆಂದು ಆರೋಪಿಗಳು ಆರೋಪಿಸಿದ್ದಾರೆ.












Click it and Unblock the Notifications