• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನ ರೊಜಾರಿಯೊ ಕೆಥೆಡ್ರಲ್ ಗೆ 450 ವರ್ಷ, ಕ್ರಿಶ್ಚಿಯನ್ನರಿಗೆ ಇರುವ ಭಾವನಾತ್ಮಕ ಬಂಧ

|
Google Oneindia Kannada News

ಕಡಲ ತಡಿಯ ಮಂಗಳೂರು ಚರ್ಚ್ ಗಳ ನಗರ ಎಂದೇ ಪ್ರಸಿದ್ಧಿ ಪಡೆದಿದೆ. ಇತಿಹಾಸ ಸಾರುವ ಇಲ್ಲಿಯ ಅತ್ಯಂತ ಸುಂದರ, ವಿಶಾಲ ಚರ್ಚ್ ಗಳು ಇಂದಿಗೂ ಪ್ರವಾಸಿಗರನ್ನು ಕೈ ಬೀಸಿ ಕೆರೆಯುತ್ತಿವೆ. ಮಂಗಳೂರಿನ ಮಿಲಾಗ್ರಿಸ್ , ಸಂತ ಅಲೋಶಿಯಸ್ , ಸಂತ ಆನ್ಸ್, ಆಂಗ್ಲಿಕನ್ ಚರ್ಚ್, ಪಜೀರ್ ಚರ್ಚ್ ಸೇರಿದಂತೆ ಇನ್ನಿತರ ಚರ್ಚ್ ಗಳು ಪ್ರಸಿದ್ಧವಾಗಿವೆ.

ಅಂದಹಾಗೆ ಇಲ್ಲಿನ ಬೋಳಾರದಲ್ಲಿರುವ ಪ್ರಸಿದ್ಧ ರೊಜಾರಿಯೊ ಕೆಥೆಡ್ರಲ್ ಚರ್ಚ್ ಗೆ 450 ವರ್ಷ ತುಂಬಿದ ಸಂಭ್ರಮ. ಅವಿಭಜಿತ ಮಂಗಳೂರು ಧರ್ಮ ಪ್ರಾಂತ್ಯದ ಪ್ರಥಮ ಚರ್ಚ್ ಇದಾಗಿದ್ದು, ಈಗ 450ನೇ ವರ್ಷಾಚರಣೆ ಸಂಭ್ರಮದಲ್ಲಿದೆ. 1568ನೇ ಇಸವಿಯಲ್ಲಿ ಪೋರ್ಚುಗೀಸರು ಸ್ಥಾಪಿಸಿದ ಚರ್ಚ್ ಇದು.

ಟಿಪ್ಪು ದಾಳಿಯಿಂದ ರಕ್ಷಿಸಿದ ಹಿಂದೂ ಕುಟುಂಬಗಳಿಗೆ ಕ್ರೈಸ್ತರ ಗೌರವಟಿಪ್ಪು ದಾಳಿಯಿಂದ ರಕ್ಷಿಸಿದ ಹಿಂದೂ ಕುಟುಂಬಗಳಿಗೆ ಕ್ರೈಸ್ತರ ಗೌರವ

ಕರ್ನಾಟಕದ ದಕ್ಷಿಣ ಕರಾವಳಿ ಜನರ ನೆಚ್ಚಿನ ರೋಸರಿ ಮಾತೆಯ ಈ ದೇಗುಲ, 'ಅವರ್ ಲೇಡಿ ಆಫ್ ರೋಸರಿ ಕೆಥೆಡ್ರಲ್' ಎಂದೇ ಪ್ರಸಿದ್ಧವಾಗಿದೆ. ಅವರ್ ಲೇಡಿ ಆಫ್ ರೋಜರಿಗೆ ಸಮರ್ಪಿಸಿದ ಈ ಚರ್ಚ್ ನ 450ನೇ ವರ್ಷದ ನೆನಪಿಗಾಗಿ ಈ ವರ್ಷವನ್ನು ಜಪ ಮಾಲೆಯ ಪ್ರಾರ್ಥನಾ ವರ್ಷವಾಗಿ ಆಚರಿಸಲಾಗುತ್ತಿದೆ.

ಪೋರ್ಚುಗೀಸರು ಚರ್ಚ್ ಸ್ಥಾಪನೆ ಮಾಡಿದರು

ಪೋರ್ಚುಗೀಸರು ಚರ್ಚ್ ಸ್ಥಾಪನೆ ಮಾಡಿದರು

ಪೋರ್ಚುಗೀಸರು 1568 ರಲ್ಲಿ ಮಂಗಳೂರಿಗೆ ಬಂದಾಗ ಈಗಿನ ರೊಜಾರಿಯೋ ಕೆಥೆಡ್ರಲ್ ಇರುವ ಸ್ಥಳದಲ್ಲೇ ಚರ್ಚ್ ಸ್ಥಾಪಿಸಿದರು. ಮೀನುಗಾರರಿಗೆ ಮೀನುಗಾರಿಕೆ ಸಂದರ್ಭದಲ್ಲಿ ದೊರೆತ ರೋಜರಿ ಮಾತೆಯ ವಿಗ್ರಹವನ್ನು ಇದರಲ್ಲಿ ಇಟ್ಟು ಪ್ರತಿಷ್ಠಾಪಿಸಿದ್ದರು. ಪೋರ್ಚುಗೀಸರ ಆಗಮನಕ್ಕೂ ಮುಂಚೆ, ಡೊಮಿನಿಕಲ್ ಪಂಥದ ಫಾದರ್ ಜೋರ್ದುನುಸ್ಸ ಎಂಬವರು ಕರಾವಳಿಯಲ್ಲಿ ಕ್ರೈಸ್ತ ಧರ್ಮ ವಿಸ್ತರಣೆಗೆ ದುಡಿಯುತ್ತಿದ್ದರು. ಹಾಗಾಗಿ ಇಲ್ಲೊಂದು ಚರ್ಚ್ ಇದ್ದಿರಬಹುದು. ಅದು ಬೋಳಾರಕ್ಕಿಂತಲೂ ಸ್ವಲ್ಪ ಮುಂದೆ ಕಡಲಿಗೆ ಇನ್ನೂ ಹತ್ತಿರದಲ್ಲಿರುವ ಬೆಂಗರೆ ಎಂಬಲ್ಲಿತ್ತು ಎಂದು ಹೇಳಲಾಗಿದೆ.

ಬೆಂಗರೆಯ ಪಾಳೇಗಾರನಿಗೆ ಸಿಕ್ಕ ಶಿಲುಬೆ ಕೊಟ್ಟ ಎಂಬ ಪ್ರತೀತಿ

ಬೆಂಗರೆಯ ಪಾಳೇಗಾರನಿಗೆ ಸಿಕ್ಕ ಶಿಲುಬೆ ಕೊಟ್ಟ ಎಂಬ ಪ್ರತೀತಿ

ಅದು ಫಲ್ಗುಣಿ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಾನ. ಪೋರ್ಚುಗೀಸರು ಮಂಗಳೂರಿಗೆ ಬಂದಾಗ, ಬೆಂಗರೆಯ ಪಾಳೇಗಾರನು ತನಗೆ ಸಮುದ್ರದಲ್ಲಿ ದೊರೆತ ಶಿಲುಬೆಯೊಂದನ್ನು ಅವರಿಗೆ ಕೊಟ್ಟನೆಂದೂ ಪ್ರತೀತಿಯಿದೆ. 1784ನೇ ಇಸವಿಯಲ್ಲಿ ಟಿಪ್ಪು ಸೈನ್ಯ ಈ ಚರ್ಚ್ ಕೆಡವಿತ್ತು. ಆ ಸಂದರ್ಭದಲ್ಲಿ ಜೆಸುಯಿಟ್ ರೋಮನ್ ಕೆಥೊಲಿಕ್ ಕ್ರೈಸ್ತ ಪಂಥ ಫಾದರ್ ಗಳು, ಈ ರೊಸಾರಿಯೋ ದೇಗುಲದಲ್ಲಿದ್ದ ಮೇರಿ ಮಾತೆಯ ವಿಗ್ರಹವನ್ನು ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಸುಪ್ರಸಿದ್ಧ ಸಂತ ಅಲೋಸಿಯಸ್ ಕಾಲೇಜಿನ ಸಂಗ್ರಹಾಲಯದಲ್ಲಿ ಅಡಗಿಸಿಟ್ಟರು ಎಂದು ಹೇಳಲಾಗುತ್ತದೆ. ಬಳಿಕ ಆ ವಿಗ್ರಹವನ್ನು ಅಲ್ಲಿಂದ ತಂದಿಲ್ಲ. ಹಾಗಾಗಿ ಮೂಲ ವಿಗ್ರಹ ಇನ್ನೂ ಅಲ್ಲಿಯೇ ಇರಬಹುದು ಎನ್ನಲಾಗಿದೆ.

ಸುವಿಶಾಲವಾದ ಚರ್ಚ್ ಮತ್ತೆ ಕಟ್ಟಲಾಯಿತು

ಸುವಿಶಾಲವಾದ ಚರ್ಚ್ ಮತ್ತೆ ಕಟ್ಟಲಾಯಿತು

ಟಿಪ್ಪು ಬಂಧನದಿಂದ ವಾಪಸಾದ ಕೆಥೊಲಿಕ್ ಕ್ರೈಸ್ತರು ಇಲ್ಲಿ ಚರ್ಚ್ ಪುನರ್ ನಿರ್ಮಾಣ ಮಾಡಿದರು. 1851ರಲ್ಲಿ ಈ ಚರ್ಚ್ ಕೆಥೆಡ್ರಲ್ ಆಗಿ ಘೋಷಿಸಲ್ಪಟ್ಟಿತು. ಅಲ್ಲಿಂದ ಸುಮಾರು 60 ವರ್ಷಗಳ ಬಳಿಕ ಹಳೆಯ ಚರ್ಚ್ ಅನ್ನು ಸಂಪೂರ್ಣವಾಗಿ ಕೆಡವಿ ಸುಂದರ, ಸುವಿಶಾಲವಾಗಿ ಮತ್ತೊಮ್ಮೆ ರೂಪಿಸಲಾಯಿತು. ಹೀಗೆ 1910ರಲ್ಲಿ ಜೆಸುಯೆಟ್ ಫಾದರ್ ಹೆನ್ರಿ ಬಝೂನಿ ಅವರ ನೇತೃತ್ವದಲ್ಲಿ ಚರ್ಚ್ ಸುಂದರಗೊಂಡಿತು. ವ್ಯಾಟಿಕನ್ ನಗರದಲ್ಲಿರುವ ಸೇಂಟ್ ಪೀಟರ್ಸ್ ಬೆಸಿಲಿಕಾದ ಗುಮ್ಮಟವನ್ನೇ ಹೋಲುವ ಸುಂದರ ಗುಮ್ಮಟವನ್ನು ರೊಸಾರಿಯೋ ಚರ್ಚ್ ಕೂಡ ಹೊಂದಿದೆ.

ನಾವಿಕರ ಪಾಲಿನ ದೀಪ ಸ್ತಂಭದಂತೆ

ನಾವಿಕರ ಪಾಲಿನ ದೀಪ ಸ್ತಂಭದಂತೆ

ಜತೆಗೆ ಹಲವು ಕಮಾನುಗಳಿಂದ ಕೂಡಿದ ಸುಂದರ ವಾಸ್ತು ವಿನ್ಯಾಸವನ್ನು ಹೊಂದಿದೆ. ಈಗ ಈ ಚರ್ಚ್ ಗೆ 450 ವರ್ಷ ತುಂಬಿದೆ. ಚರ್ಚ್ ನ ಎತ್ತರದ ಗುಮ್ಮಟ ಹಾಗೂ ಅದರ ಮೇಲಿರುವ ಶಿಲುಬೆ, ಹಿಂದಿನ ಕಾಲದಲ್ಲಿ ಕಡಲಿನಿಂದ ಹಿಂತಿರುಗುವ ನಾವಿಕರಿಗೆ ದೀಪಸ್ತಂಭವಾಗಿಯೂ ಸಹಾಯ ಮಾಡುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ಪೋರ್ಚುಗೀಸ್ ಲಾಂಛನಗಳನ್ನು ಈಗಲೂ ರೋಸಾರಿಯೋದಲ್ಲಿ ಕಾಣಬಹುದು.

English summary
Mangaluru Rosario Cathedral celebrating 450 years . Here is the interesting details about this cathedral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X