• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಡರಾತ್ರಿ ನಡು ರಸ್ತೆಯಲ್ಲಿ ಐಟಿಐ ಕಾಲೇಜು ಉಪನ್ಯಾಸಕನ ಬರ್ಬರ ಕೊಲೆ

|

ಮಂಗಳೂರು ಮೇ 28: ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ.

ಮಿಥುನ್ ರೈಗೆ ಬಹಿರಂಗ ಬೆದರಿಕೆಯ ವಿಡಿಯೋ ವೈರಲ್

ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಂ ಜೈನ್ (45) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವಿಕ್ರಂ ಜೈನ್ ಅವರನ್ನು ಹತ್ಯೆ ಮಾಡಿದ್ದಾರೆ.

ಐಸಿಸ್ ಉಗ್ರರ ಭೀತಿ: ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ

ಕೊಲೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಹೇಳಲಾಗಿದೆ. ವೇಣೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ನಡೆಸಿದ್ದಾರೆ. ವಿಕ್ರಂ ಜೈನ್ ನಿನ್ನೆ ರಾತ್ರಿ 10 ಗಂಟೆವರೆಗೂ ಮುಂಡೂರಿನಲ್ಲಿ ಯುವಕರ ಜೊತೆಗಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಹೊಟ್ಟೆ ಮತ್ತು ತಲೆಯ ಭಾಗಕ್ಕೆ ಕತ್ತಿಯಿಂದ ಹೊಡೆದ ವಿಕ್ರಂ ಜೈನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕತ್ತಿ ಶವದ ಬಳಿ ರಸ್ತೆಯಲ್ಲೇ ಬಿದ್ದಿದ್ದರೆ, ಮತ್ತೊಂದು, ಹೊಟ್ಟೆಯಲ್ಲೇ ಇತ್ತು. ಅವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಚಿತ ವ್ಯಕ್ತಿಗಳೇ ಹಳೇ ದ್ವೇಷದಿಂದ ಕೊಲೆ ನಡೆಸಿರಬೇಕು ಎನ್ನಲಾಗುತ್ತಿದೆ.

English summary
In a shocking incident, a man hacked to death in Mundoor near Belthangadi.This incident happened during late night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X