ಆಯತಪ್ಪಿ ಫ್ಲ್ಯಾಟ್ ನ 2 ನೇ ಮಹಡಿಯಿಂದ ಬಿದ್ದು ಮೃತಪಟ್ಟ ವ್ಯಕ್ತಿ
ಮಂಗಳೂರು, ಏಪ್ರಿಲ್ 29:ನಗರದ ಕೊಡಿಯಾಲ್‌ಗುತ್ತು ಸಮೀಪದ ಫ್ಲ್ಯಾಟ್‌ನ ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಭಾನುವಾರ (ಏ.28) ಸಂಜೆ ನಡೆದಿದೆ. ಮೃತಪಟ್ಟ ದುರ್ದೈವಿಯ ಹೆಸರು ಕೊಡಿಯಾಲ್‌ಬೈಲ್ ನಿವಾಸಿ ರಾಜೇಶ್ ಶೆಣೈ (38).
ರಾಜೇಶ್ ಶೆಣೈ ಅವರು ಕುಟುಂಬ ಕೊಡಿಯಾಲ್‌ಗುತ್ತುವಿನಲ್ಲಿರುವ ಫ್ಲ್ಯಾಟ್ ನಲ್ಲಿ ಎರಡನೇ ಮಹಡಿಯಲ್ಲಿ ವಾಸವಾಗಿತ್ತು.ಹಲವು ಸಮಯದಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ ರಾಜೇಶ್ ಅವರು, ಫ್ಲ್ಯಾಟ್‌ನ ತೆರೆದ ಗ್ಯಾಲರಿಗೆ ಬಂದ ವೇಳೆ ಏಕಾಏಕಿ ಆಯತಪ್ಪಿ 2ನೇ ಮಹಡಿಯಿಂದ ಕೆಳಗಿ ಬಿದ್ದಿದ್ದಾರೆ.

ಅದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ ಮೃತಪಟ್ಟಿದ್ದಾರೆ. ಘಟನೆ ನಡೆಯುವ ವೇಳೆ ರಾಜೇಶ್ ಅವರ ತಾಯಿ ಮಾತ್ರ ಮನೆಯಲ್ಲಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗಡೆ ಹೋಗಿದ್ದರು. ಈ ಘಟನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications