ಮೂಡಬಿದಿರೆ: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ

ಮಂಗಳೂರು ಜುಲೈ 04: ತಂದೆಯೇ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಮೂಡಬಿದರೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರ ಸಂಬಂಧ ಅತ್ಯಾಚಾರ ನಡೆಸಿದ ಆರೋಪದ ಮೇಲೆ ತಂದೆಯನ್ನು ಮೂಡಬಿದಿರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ವ್ಯಕ್ತಿ ಕೇರಳ ಮೂಲದವನೆಂದು ಗುರುತಿಸಲಾಗಿದೆ. ಇಲ್ಲಿಯ ಪುಚ್ಚೆಮೊಗರು ಎಂಬಲ್ಲಿನ ಗಿರಣಿಯೊಂದರಲ್ಲಿ ಕೆಲಸಕ್ಕಿದ್ದ ಈತ, ಜಾರ್ಖಂಡ್ ಮೂಲದ ಪತ್ನಿ ಹಾಗು ಮಗಳೊಂದಿಗೆ ಅಲ್ಲಿಯೇ ಸಮೀಪದ ಮನೆಯೊಂದರಲ್ಲಿ ವಾಸವಾಗಿದ್ದ.

ಈತನ 14 ವರ್ಷದ ಮಗಳು ಇತ್ತೀಚೆಗೆ ರಾತ್ರಿ ಮನೆಯ ಹೊರಗೆ ಮಲಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Man arrested for Raped his own daughter ?

ಈ ಕುರಿತು ಮೂಡಬಿದಿರೆ ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದಾಗ ಸರಿಯಾದ ಕಾರಣ ತಿಳಿಸಿರಲಿಲ್ಲ. ಪರಿಣಾಮ ಆಕೆಯನ್ನು ಮಂಗಳೂರಿನ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಂದೆ ತನ್ನ ಮೇಲೆ ಅತ್ಯಾಚಾರದ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.

ಆದರೆ ಈ ಘಟನೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಲಾಗಿದೆ. ಬಾಲಕಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಾಲಕಿಯ ತಂದೆಯ ವಿರುದ್ಧ ಮೂಡಬಿದಿರೆ ಪೊಲೀಸರು ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+