ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಚುನಾವಣಾ ಅಸ್ತ್ರವಾದ ಭಾಷಾ ಸಮರ
ಉಡುಪಿ, ಮಾರ್ಚ್ 26: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಹಿಂದಿ ಇಂಗ್ಲಿಷ್ ಭಾಷಾ ಸಮರ..ವಾದ ಪ್ರತಿವಾದ ಮುಂದುವರೆದಿದೆ. ಕೋಟ ಶ್ರೀನಿವಾಸ ಪೂಜಾರಿ ಇದೇ ವಿಚಾರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಜಯಪ್ರಕಾಶ್ ಹೆಗಡೆ ಸ್ಪಷ್ಟಿಕರಣ ಕೊಟ್ಟು, ಒಂದೇ ವೇದಿಕೆಗೆ ಬಂದು ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ಸಂಸದನಾದವನಿಗೆ ಹಿಂದಿ ಇಂಗ್ಲಿಷ್ ಬರಬೇಕು.. ಭಾಷೆ ಬರದಿದ್ದರೆ ಸಂಸತ್ತಿನಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಜೊತೆ ಕೆಲಸ ಮಾಡಿಸಲಿಕ್ಕೂ ಕಷ್ಟ. ಸಂಸತ್ ಕಲಾಪದಲ್ಲಿ ಭಾಷಣ ಮಾಡಿದರೆ ಯಾರಿಗೂ ಅರ್ಥವಾಗುವುದಿಲ್ಲ. ಹೀಗಂತ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ಹೇಳಿದ್ದೆ ತಡ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಭಾಷಾ ಸಮರ ಆರಂಭವಾಗಿದೆ. ನಾನು ಆರು ತಿಂಗಳಲ್ಲಿ ಹಿಂದಿ ಕಲಿತು ಸಂಸತ್ತಿನಲ್ಲಿ ಭಾಷಣ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಇದೇ ವಿಚಾರವನ್ನು ಪ್ರಚಾರದ ವಸ್ತುವಾಗಿ ಮಾಡಿದ್ದಾರೆ. ಕೋಟ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಮರಸಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಕೋಟ, ಕೂಲಿ ಮಾಡುವವರ ಕುಟುಂಬದಿಂದ ಬಂದವನು. ನಾನು ಕೂಲಿ ಮಾಡುತ್ತಿದ್ದೆ. ಹಿಂದಿ ಕಲಿತೇನೆ ಎಂದಿದ್ದಾರೆ.
ಟಿಕೆಟ್ ಘೋಷಣೆಯಾದ ನಂತರ ಜಯಪ್ರಕಾಶ್ ಹೆಗ್ಗಡೆ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ ಮುಂದಿನ ಚುನಾವಣಾ ಪ್ರಚಾರ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದನ ಭಾಷಾ ಕಿಚ್ಚಿಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇಷ್ಟು ವರ್ಷದ ರಾಜಕೀಯದಲ್ಲಿ ನಾನು ಯಾರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ.1994ರಿಂದ ಇಂದಿನವರೆಗೆ ವಿಧಾನಸಭೆಯಲ್ಲಿ ನಾನು ಆಡಿದ ಮಾತನ್ನು ಕಡತದಿಂದ ತೆಗೆದುಹಾಕಿಲ್ಲ. ಅವರ ಪಕ್ಷದವರೇ ಅವರನ್ನು ಕೀಳಾಗಿ ಮಾತನಾಡುತ್ತಿದ್ದಾರೆ ಬಿಟ್ಟರೆ ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕರಾವಳಿ ಮಲೆನಾಡನ್ನು ಹಂಚಿಕೊಂಡ ಚುನಾವಣಾ ರಣಾಂಗಣದಲ್ಲಿ ಸಜ್ಜನ ವರ್ಸಸ್ ಸಿಂಪಲ್ ಖ್ಯಾತಿಯ ಇಬ್ಬರು ಅಭ್ಯರ್ಥಿಗಳ ನಡುವಿನ ಹೋರಾಟಕ್ಕೆ ಭಾಷೆ ಮೊದಲ ಅಸ್ತ್ರವಾಗಿದೆ. ಚುನಾವಣೆಗೆ ಭರ್ತಿ ಒಂದು ತಿಂಗಳು ಬಾಕಿ ಇದೆ. ಕದನ ಕಲಿಗಳಿಂದ ಯಾವೆಲ್ಲಾ ಪಟ್ಟುಗಳ ಪ್ರದರ್ಶನ ಆಗುತ್ತದೆ ಎಂಬ ಕುತೂಹಲವಿದೆ.












Click it and Unblock the Notifications