ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ; ವಿವರಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 21; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಜೂನ್ 21ರಿಂದ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.

ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಈ ಕುರಿತು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅನ್‌ಲಾಕ್ 1.0 ಭಾಗವಾಗಿ ಅಗತ್ಯವಸ್ತು ಖರೀದಿ ಅವಧಿ ವಿಸ್ತರಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಕ್ತರ ಮನೆಮನೆಗೆ ಕೊರೊನಾ ಲಸಿಕೆದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಕ್ತರ ಮನೆಮನೆಗೆ ಕೊರೊನಾ ಲಸಿಕೆ

ಆದರೆ ಜಿಲ್ಲೆಯಾದ್ಯಂತ ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ವಾರಾಂತ್ಯದ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ.

ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ, ಕೊಚ್ಚಿ ಹೋದ ಸೇತುವೆ ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ, ಕೊಚ್ಚಿ ಹೋದ ಸೇತುವೆ

Lockdown Relaxation In Dakshina Kannada District

ಬಸ್ ಸಂಚಾರವಿಲ್ಲ; ದಕ್ಷಿಣ ಕನ್ನಡದಲ್ಲಿ ಯಾವುದೇ ಬಸ್ ಸಂಚಾರಕ್ಕೆ ಅನುಮತಿ ‌ನೀಡಿಲ್ಲ. ಜೂನ್ 21ರಿಂದ ಜುಲೈ 5ರ ಸಂಜೆಯವರೆಗೂ ಆದೇಶ ವಿಸ್ತರಿಸಲಾಗಿದೆ.

ಮಂಗಳೂರು; ಕೋವಿಡ್ ಪರೀಕ್ಷೆಗೆ ಜಿಲ್ಲಾಡಳಿತದ ಹೊಸ ಆದೇಶ ಮಂಗಳೂರು; ಕೋವಿಡ್ ಪರೀಕ್ಷೆಗೆ ಜಿಲ್ಲಾಡಳಿತದ ಹೊಸ ಆದೇಶ

ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಬೀದಿಬದಿ ವ್ಯಾಪಾರ ಮತ್ತು ಮದ್ಯ ಪಾರ್ಸೆಲ್‌ಗೆ ಮಾತ್ರ ಮಧ್ಯಾಹ್ನ 1ರವರೆಗೆ ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ಪಾರ್ಕ್ ಮತ್ತು ಸಾರ್ವಜನಿಕ ಉದ್ಯಾನ ತೆರೆಯಲು ಅವಕಾಶ ಇಲ್ಲ. ನಿರ್ಮಾಣ ಚಟುವಟಿಕೆ ಮತ್ತು ಸ್ಟೀಲ್, ಸಿಮೆಂಟ್ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.

ಆಟೋ ರಿಕ್ಷಾ ಮತ್ತು ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರ ಸಹಿತ ಸಂಚರಿಸಬಹುದಾಗಿದೆ. ಕೆಎಸ್ಆರ್‌ಟಿಸಿ ಬಸ್ ಸಂಚಾರವಿಲ್ಲ. ಹೊರ ಜಿಲ್ಲೆಯಿಂದಲೂ ಬಸ್ ಆಗಮಿಸುವಂತಿಲ್ಲ.

English summary
Lockdown relaxation in Dakshina Kannada district. People can buy essential items from morning 7 to 1 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X