ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ವಕೀಲ ರಾಜೇಶ್ ಭಟ್ ಪ್ರಕರಣ; ಸಂತ್ರಸ್ತೆ ಹೇಳಿದ್ದೇನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 24; ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ವಾರ ಕಳೆದಿದೆ. ಆದರೂ ಈವರೆಗೂ ರಾಜೇಶ್ ಭಟ್ ಬಂಧನ ಆಗಿಲ್ಲ. ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ರಾಜೇಶ್ ಭಟ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದರ ನಡುವೆ ಸಂತ್ರಸ್ತ ಯುವತಿ ಮಾಧ್ಯಮಗಳ ಮುಂದೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾಳೆ.

ಮಂಗಳೂರು; ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದ ವಕೀಲ ರಾಜೇಶ್ ಭಟ್ ಮಂಗಳೂರು; ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದ ವಕೀಲ ರಾಜೇಶ್ ಭಟ್

ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಮಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ತರಬೇತಿಗೆಂದು ರಾಜೇಶ್ ಭಟ್ ಕಛೇರಿಗೆ ಹೋಗುತ್ತಿದ್ದಳು. ಬೆಳಗ್ಗೆ ಕಾಲೇಜು ಇರುತ್ತಿದ್ದರಿಂದ ಮಧ್ಯಾಹ್ನ 2.30ರಿಂದ ರಾತ್ರಿ 8 ಗಂಟೆಯವರೆಗೆ ತರಬೇತಿ ಸಮಯ ಎಂದು ತಿಳಿಸಲಾಗಿತ್ತು.

"ಅಷ್ಟು ತಡ ಯಾಕೆ ಅಂತಾ ಪ್ರಶ್ನಿಸಿದಾಗ, ಅಷ್ಟು ಹೊತ್ತು ಎಲ್ಲರೂ ಇರುತ್ತಾರೆ. ಆತಂಕ ಬೇಡ ಎಂದು ಹೇಳಿದ್ದರು. ರಾಜೇಶ್ ಭಟ್ ಕಛೇರಿಯಲ್ಲಿ ಇಬ್ಬರು ಮಾತ್ರ ಪುರುಷ ಕೆಲಸಗಾರರಿದ್ದು, ಬೇರೆ ಎಲ್ಲರೂ ಮಹಿಳೆಯರೇ ಇದ್ದರು. ಹೀಗಾಗಿ ಧೈರ್ಯವಾಗಿದ್ದೆ" ಎಂದು ಸಂತ್ರಸ್ತ ಯುವತಿ ತಿಳಿಸಿದಳು.

ವಾಟ್ಸಪ್ ಸಂದೇಶ ಕಳಿಸುತ್ತಿದ್ದರು

ವಾಟ್ಸಪ್ ಸಂದೇಶ ಕಳಿಸುತ್ತಿದ್ದರು

"ಆದರೆ‌ ದಿನ ಕಳೆದಂತೇ ರಾಜೇಶ್ ಭಟ್ ನನ್ನನ್ನೇ ಹೆಚ್ಚು ಸಮಯ ಕೆಲಸ ಮಾಡಿಸುತ್ತಿದ್ದರು. ರಾತ್ರಿ ವಾಟ್ಸಪ್ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರು. ನೀನು ನೋಡೋಕೆ ಚೆಂದ ಇದ್ದೀಯಾ ಅಂತಾ ಹೇಳಿ ನಾನು ಕೆಲಸ ಮಾಡುತ್ತಿದ್ದಾಗ ಸಿಸಿಟಿವಿ ಪೋಟೋಗಳನ್ನು ತೆಗೆದು ವಾಟ್ಸಪ್ ಮಾಡುತ್ತಿದ್ದರು. ಆದರೆ ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ" ಎಂದು ಯುವತಿ ಹೇಳಿದರು.

ಬಲತ್ಕಾರ ಮಾಡಲು ಯತ್ನಿಸಿದರು

ಬಲತ್ಕಾರ ಮಾಡಲು ಯತ್ನಿಸಿದರು

"ಸೆಪ್ಟೆಂಬರ್ 24ರಂದು ಕಛೇರಿಯಲ್ಲಿ ರಾತ್ರಿ 8 ಗಂಟೆಯ ವೇಳೆಗೆ ಒಬ್ಬಳೇ ಕೆಲಸ ಮಾಡುತ್ತಿದ್ದಾಗ ರಾಜೇಶ್ ಭಟ್ ಕೂಡಾ ಛೇಂಬರ್ ನಲ್ಲಿದ್ದರು. ನಾನು ಒಬ್ಬಳೇ ಇರೋದನ್ನು ಗಮನಿಸಿ, ಬೆಲ್ ಹಾಕಿ ಛೇಂಬರ್ ಒಳಗೆ ಕರೆದರು. ಅಸಹ್ಯ ವಾಗಿ ವರ್ತಿಸಿ ಬಲತ್ಕಾರ ಮಾಡುವುಕ್ಕೆ ಪ್ರಯತ್ನಿಸಿದರು. ತಪ್ಪಿಸಿಕೊಂಡು ನಾನು ಕಛೇರಿಯಿಂದ ಓಡಿ ಹೋದೆ. ಆ ಬಳಿಕ ನನ್ನನ್ನು ಸ್ನೇಹಿತ ಕರೆದುಕೊಂಡು ಹೋದ" ಎಂದು ಯುವತಿ ಹೇಳಿದರು.

"ಆ ಬಳಿಕ ನಾನು ರಾಜೇಶ್ ಭಟ್‌ಗೆ ನನ್ನ ಸ್ನೇಹಿತೆಯ ಮೊಬೈಲ್‌ನಿಂದ ಕರೆ ಮಾಡಿದೆ. ಈ ವೇಳೆ ರಾಜೇಶ್ ಭಟ್ ಈ ಬಾರಿ ಕ್ಷಮಿಸು ಅಂತಾ ಮನವಿ ಮಾಡಿದ್ದ. ಆದರೆ ಆತ ಕ್ಷಮೆಗೆ ಅರ್ಹ ವ್ಯಕ್ತಿ ಅಲ್ಲ ಅಂತಾ ನನಗೆ ಗೊತ್ತಾಯಿತು" ಎಂದರು.

ಹಲವು ರೀತಿ ಒತ್ತಡ ಹಾಕಿದರು

ಹಲವು ರೀತಿ ಒತ್ತಡ ಹಾಕಿದರು

"ಆಡಿಯೋ ವೈರಲ್ ಆದ ಬಳಿಕ ರಾಜೇಶ್ ಭಟ್ ನನ್ನ ಮೇಲೆಯೇ ಹಲವು ರೀತಿಯ ಒತ್ತಡವನ್ನು ಹಾಕಿದ್ದರು. ನಾನು ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದರು ಮತ್ತು ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ವಿದೇಶಕ್ಕೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ಬೆದರಿಸಿದರು ಎಂದರು.

"ನಾನು ವಾಸವಿದ್ದ ಹಾಸ್ಟೆಲ್ ವಾರ್ಡನ್ ಮೂಲಕವೂ ನನಗೆ ಒತ್ತಡ ಹಾಕಿಸಿದ್ದರು. ದೂರು ಕೊಟ್ಟರೆ ತುಂಬಾ ದುಷ್ಪರಿಣಾಮಗಳನ್ನು ಎದುರಿಸಬೇಕು ಅಂತಾ ವಾರ್ಡನ್ ಕೂಡಾ ಹೆದರಿಸಿದ್ದರು ಮತ್ತು ನನ್ನ ಸ್ನೇಹಿತೆಗೂ ಸುಳ್ಳು ದೂರು ನೀಡಿ ಮುಚ್ಚಳಿಕೆ ಬರೆಸಿದರು. ಸೆಪ್ಟೆಂಬರ್24ರ ಕಛೇರಿಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ರಾಜೇಶ್ ಭಟ್ ಡಿಲೀಟ್ ಮಾಡಿದ್ದು, ಸಾಕ್ಷ್ಯನಾಶ ಮಾಡೋಕೆ ಪ್ರಯತ್ನಿಸಿದ್ದಾರೆ" ಎಂದು ಯುವತಿ ದೂರಿದಳು.

ಇನ್ನೂ ಬಂಧನವಾಗಿಲ್ಲ

ಇನ್ನೂ ಬಂಧನವಾಗಿಲ್ಲ

"ರಾಜೇಶ್ ಭಟ್ ವಿರುದ್ಧ ದೂರು ನೀಡಿದ ಬಳಿಕ ತುಂಬಾ ಮಂದಿ ಬೆಂಬಲ ನೀಡಿದರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತುಂಬಾ ಬೆಂಬಲ ನೀಡಿದರು. ಆದರೆ ರಾಜೇಶ್ ಭಟ್ ಬಂಧನ ಇನ್ನೂ ಆಗಿಲ್ಲ. ಬೇಲ್ ತೆಗೆದುಕೊಳ್ಳಲು ಯತ್ನಿಸುತ್ತಿರುವ ಬಗ್ಗೆಯೂ ಗೊತ್ತಾಗಿದೆ" ಎಂದು ಸಂತ್ರಸ್ತ ಯುವತಿ ಹೇಳಿದರು.

"ನನ್ನ ರೀತಿ ರಾಜೇಶ್ ಭಟ್ ಈ ಹಿಂದೆಯೂ ಹಲವು ಮಂದಿಗೆ ಲೈಂಗಿಕ ಕಿರುಕುಳ‌ ನೀಡಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಅನ್ಯಾಯಕ್ಕೊಳಗಾದ ಯುವತಿಯರು ಧೈರ್ಯವಾಗಿ ಮುಂದೆ ಬಂದು ಠಾಣೆಯಲ್ಲಿ ದೂರು ನೀಡಬೇಕೆಂದು ಒತ್ತಾಯ ಮಾಡುತ್ತಾನೆ" ಎಂದು ಯುವತಿ ತಿಳಿಸಿದರು.

English summary
Sexual harassment by Mangaluru lawyer Rajesh Bhat. Victim press conference and allegations against Rajesh Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X