ಮಂಗಳೂರು ಹೋಟೆಲಿನಲ್ಲಿ ಕೇರಳ ಮಹಿಳೆ ಹತ್ಯೆ

ಮೃತಳನ್ನು ಥಾಮಸ್ ಅವರ ಪತ್ನಿ ಅಳಿಕುಟ್ಟಿ ಎಂದು ಗುರುತಿಸಲಾಗಿದೆ. ಮೃತಳ ವಯಸ್ಸು ಅಂದಾಜು 45-45 ವರ್ಷ ಇರಬಹುದು. ಆಕೆಯನ್ನು ಸುಮಾರು ಸಮಯದ ಹಿಂದೆಯೇ ಸಾಯಿಸಲಾಗಿದ್ದು, ದೇಹವು ಭಾಗಶಃ ಕೊಳೆತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹೋಟೆಲ್ ಮೂಲಗಳ ಪ್ರಕಾರ ಅಳಿಕುಟ್ಟಿ ಜನವರಿ 14ರಂದು ಮಧ್ಯಾಹ್ನ 3 ಗಂಟೆ ವೇಳೆ ಒಬ್ಬ ಪುರುಷನ ಜತೆಗೆ ಹೋಟೆಲಿಗೆ ಬಂದಿದ್ದಳು. ಶುಕ್ರವಾರ ಬೆಳಗ್ಗೆ ಹೋಟೆಲಿನ ಸಿಬ್ಬಂದಿ ಮಹಿಳೆಯ ಕೊಠಡಿಗೆ ಹೋದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕೊಠಡಿ ಹೊರಗಿನಿಂದ ಬಾಗಿಲು ಹಾಕಿದ್ದನ್ನು ಗಮನಿಸಿ, ಒಳ ನೋಡಿದಾಗ ಮಹಿಳೆಯ ಶವ ಕಂಡುಬಂದಿದೆ.
ಮಹಿಳೆಯೊಟ್ಟಿಗೆ ಬಂದಿದ್ದ ಪುರುಷನೇ ಆಕೆಯನ್ನು ಹತ್ಯೆ ಮಾಡಿ, ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋಗಿರಬಹುದು. ಒಟ್ಟಿನಲ್ಲಿ ಪರಿಚಿತರದೇ ಈ ಕುಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯು ಕೇರಳ ಕಣ್ಣೂರಿನ ಅಳಕೋಡ್ ನಿವಾಸಿ ಎಂದು ತಿಳಿದುಬಂದಿದೆ. ಬಂದರ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.












Click it and Unblock the Notifications