Padma Shri: ಕಾಸರಗೋಡು ಭತ್ತದ ತಳಿಗಳ ಸಂರಕ್ಷಕನಿಗೆ ಒಲಿದ ಪದ್ಮಶ್ರೀ ಗೌರವ

ಮಂಗಳೂರು, ಜನವರಿ 27: ಗ್ರೋ ಬ್ಯಾಗ್‌ನಲ್ಲಿ ಭತ್ತದ ತಳಿಗಳನ್ನು ಪೋಷಿಸಿ ಸಂರಕ್ಷಿಸುತ್ತಿರುವ ಕೃಷಿಕನಿಗೆ ಈ ಬಾರಿಯ ಅತ್ಯುನ್ನತ ಪದ್ಮಶ್ರೀ ಪ್ರಸಸ್ತಿ ಒಲಿದು ಬಂದಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬೊಳ್ಳೂರು ಗ್ರಾಮ ಪಂಚಯತ್‌ನ ಬೆಳೆರಿ ನಿವಾಸಿ ಸತ್ಯನಾರಾಯಣ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕೃಷಿಕರಾಗಿದ್ದಾರೆ.

ಸುಮಾರು 650ಕ್ಕೂ ಮಿಕ್ಕಿದ ವಿವಿಧ ತಳಿಗಳನ್ನು ಸಾಕಿ ಸಂರಕ್ಷಿಸುತ್ತಿರುವ ಸತ್ಯನಾರಾಯಣರ ಕೃಷಿಯನ್ನು ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದ ಸುಮಾರು 4 ಎಕರೆ ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬರುತ್ತಿರುವ ಸತ್ಯನಾರಾಯಣ್ ತೋಟದಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಹೆಚ್ಚಾಗಿ ರಬ್ಬರ್ ಬೆಳೆಯನ್ನೇ ಬೆಳೆಸಲಾಗಿದೆ‌.

Kasargod Satyanarayan Has Been Selected For The Padma Shri Award For His Farming Practices

ಜೊತೆಗೆ ಸ್ವಲ್ಪ ಅಡಿಕೆ, ತೆಂಗು ಹಾಗು ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮೊದಲು ಗ್ರೋ ಬ್ಯಾಗ್ ನಲ್ಲಿ ಭತ್ತದ ತಳಿಗಳನ್ನು ಬೆಳೆಸಲು ಆರಂಭಿಸಿದ ಸತ್ಯನಾರಾಯಣ್ ಗೆ ಚೆರ್ಕಾಡಿ ರಾಮಚಂದ್ರ, ಬೆಳ್ತಂಗಡಿಯ ಬಿ.ಕೆ. ದೇವರಾಯರು ನೂರಕ್ಕೂ ಮಿಕ್ಕಿದ ಭತ್ತದ ವಿವಿಧ ತಳಿಗಳನ್ನು ನೀಡಿದ್ದರು. ಅದರ ಜೊತೆಗೆ ಹಲವು ಕಡೆಗಳಿಂದ ಭತ್ತದ ತಳಿಗಳ ಸಂಗ್ರಹಿಸಿರುವ ಇವರ ಸಂಗ್ರಹದಲ್ಲಿ 650ಕ್ಕೂ ಮಿಕ್ಕಿದ ವಿವಿಧ ಭತ್ತದ ತಳಿಗಳಿವೆ.

ಭತ್ತದ ತಳಿಗಳ ಬೀಜಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ನೀರಿನ ಸಮಸ್ಯೆ ಇದ್ದರೂ, ಭತ್ತದ ಕೃಷಿಗೆ ಸಮರ್ಪಕವಲ್ಲದ ಸುಮಾರು 25 ಸೆಂಟ್ಸ್ ಜಾಗದಲ್ಲಿ ಭತ್ತ ಬೆಳೆಯಲು ಆರಂಭಿಸಿದ್ದಾರೆ.

ತಳಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳಿಗೆ, ಅಧ್ಯಯನಶೀಲ ವಿದ್ಯಾರ್ಥಿಗಳಿಗೆ, ಆಸಕ್ತ ಕೃಷಿಕರಿಗೆ ಉಚಿತವಾಗಿ ನೀಡುತ್ತಿರುವ ಸತ್ಯನಾರಾಯಣ್ ಮೂಲ ತಳಿಯನ್ನು ಸಂರಕ್ಷಿಸುವ ಕೆಲಸ ಅತ್ಯಂತ ಕಷ್ಟಕರ ಎನ್ನುತ್ತಾರೆ. ಅತ್ಯಂತ ಅಪರೂಪದ ಗಂಧಸಾಲೆ, ಜೀರಿಗೆಸಾಲೆ,ಕಳಮೆ, ರಕ್ತಸಾಲಿ, ಉಪ್ಪು ನೀರಿನಲ್ಲಿ ಬೆಳೆಯುವ ಕಗ್ಗ, ಜಪಾನ್ ತಳಿಯಾದ ವೈಲೆಟ್, ಶ್ರೀಲಂಕಾ ಮತ್ತು ಫಿಲಿಫೈನ್ಸ್ ನ ಹಲವು ತಳಿಗಳೂ ಇವರ ಸಂಗ್ರಹದಲ್ಲಿದೆ. ಒಂದು ಮೀಟರ್ ವ್ಯಾಪ್ತಿಯಲ್ಲಿ 7 ರಿಂದ 8 ತಳಿಗಳನ್ನು ಬೆಳೆಸುತ್ತಿದ್ದಾರೆ.

ಪ್ರಶಸ್ತಿ ದೊರತಿರುವುದಕ್ಕೆ ಅತ್ಯಂತ ಸಂತಸ ವ್ಯಕ್ತಪಡಿಸಿರುವ ಸತ್ಯನಾರಾಯಣ ಪ್ರಶಸ್ತಿಗೆ ಆಯ್ಕೆಯಾಗುವ ಯಾವ ನಿರೀಕ್ಷೆಯೂ ಇರಲಿಲ್ಲ ಎನ್ನುತ್ತಾರೆ. ಪ್ರಶಸ್ತಿಗೆ ನನ್ನಕ್ಕಿಂತ ಊರಿನ ಜನ ಹೆಚ್ಚು ಸಂತಸಪಡುತ್ತಿದ್ದಾರೆ. ಕೇಂದ್ರ ಸರಕಾರದಿಂದ ಈ ಹಿಂದೆಯೂ ಪ್ರಶಸ್ತಿ ದೊರೆತಿತ್ತು. ಆದರೆ ಪದ್ಮಶ್ರೀ ಯಂತಹ ಅತ್ಯುನ್ನತ ಪ್ರಶಸ್ತಿ ದೊರೆತಿರುವುದಕ್ಕೆ ಖುಷಿಯಾಗಿದೆ. ಇಂತಹ ಪ್ರಶಸ್ತಿಗಳು ಸಾಧನೆ ಮಾಡುವವರಿಗೆ ಪ್ರೇರಣೆಯಾಗುತ್ತದೆ. ಈ ರೀತಿಯ ಗುರುತಿಸುವಿಕೆ ಸಮಾಜಕ್ಕೆ ದೊಡ್ಡ ಆಸ್ತಿಯಾಗುತ್ತದೆ ಎನ್ನುತ್ತಾರೆ ಸತ್ಯ ನಾರಾಯಣ್‌. ಪತ್ನಿ ಜಯಶ್ರೀ ಮತ್ತು ಮೂರು ಮಕ್ಕಳಾದ ನವ್ಯಶ್ರೀ, ಗ್ರೀಶ್ಮಾ ಮತ್ತು ಅಭಿನವ್ ಎನ್ನುವ ಮೂವರು ಮಕ್ಕಳ ಸುಖೀ ಕುಟುಂಬ ಸತ್ಯನಾರಾಯಣರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+