• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಸ್ತೂರಿ ರಂಗನ್ ವರದಿ: ಕೇಂದ್ರದ ಅಧಿಸೂಚನೆಗೆ ಕರ್ನಾಟಕದ ವಿರೋಧ

By ಶಂಶಿರ್ ಬುಡೋಳಿ
|

ಮಂಗಳೂರು, ಮಾರ್ಚ್ 5: ರಾಜ್ಯದ ಪಶ್ಚಿಮ ಘಟ್ಟದ ನೂರಾರು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಕೇಂದ್ರ ಸರಕಾರ 'ಪರಿಸರ ಸೂಕ್ಷ್ಮ' ಪ್ರದೇಶ ಎಂದು ಘೋಷಿಸಿ ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಕನಾ೯ಟಕ ಸರಕಾರ ತನ್ನ ಆಕ್ಷೇಪಣೆ ಸಲ್ಲಿಸಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ 'ಒನ್ ಇಂಡಿಯಾ'ಗೆ ಹೇಳಿಕೆ ನೀಡಿದ್ದಾರೆ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿಕೊಂಡಿರುವ ಜೀವ ವೈವಿಧ್ಯ ತಾಣ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ 2015ರಲ್ಲಿ ಕರಡು ಅಧಿಸೂಚನೆ ಹೊರಡಿಸಿತ್ತು. ಅದರ ಅವಧಿ ಇದೇ ಮಾರ್ಚ್ 4ಕ್ಕೆ ಮುಗಿದಿದೆ. ಹೀಗಾಗಿ ಕೇಂದ್ರ ಸರ್ಕಾರ ಫೆಬ್ರವರಿ 27ರಂದು ಎರಡನೇ ಬಾರಿ ಕರಡು ಅಧಿಸೂಚನೆ ಹೊರಡಿಸಿತ್ತು.[ಮೂಡಬಿದಿರೆಯಲ್ಲಿ ಕುಸಿಯುತ್ತಿರುವ ಅಂತರ್ಜಲ, ಬೇಸಿಗೆ ಭೀಕರ]

ರಾಜ್ಯ ಸರಕಾರದಿಂದ ಆಕ್ಷೇಪಣೆ

ರಾಜ್ಯ ಸರಕಾರದಿಂದ ಆಕ್ಷೇಪಣೆ

ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಅರಣ್ಯದ ಆಸು ಪಾಸು ಸೇರಿದಂತೆ ಜನ ವಸತಿ ಪ್ರದೇಶಗಳನ್ನೂ 'ಜೀವಸೂಕ್ಷ್ಮ ಪ್ರದೇಶ'ಗಳೆಂದು ಪರಿಗಣಿಸಲು ವರದಿ ಶಿಫಾರಸು ಮಾಡಿತ್ತು. ಆದರೆ ಕನಾ೯ಟಕ ಸರಕಾರವು ಇದನ್ನು ಮೀಸಲು ಅರಣ್ಯಕ್ಕೆ ಮಾತ್ರ ಸೀಮಿತಗೊಳಿಸಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರಕಾರ ರಾಜ್ಯದ ಮನವಿ ಪರಿಗಣಿಸದೇ

ಕರಡು ಅಧಿಸೂಚನೆ ಹೊರಡಿಸಿದೆ. ಇದು ರಾಜ್ಯದ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕರ್ನಾಟಕ, ಕೇರಳದಿಂದ ಮಾತ್ರ ಅಪಸ್ವರ

ಕರ್ನಾಟಕ, ಕೇರಳದಿಂದ ಮಾತ್ರ ಅಪಸ್ವರ

ಕನಾ೯ಟಕ ಮಾತ್ರವಲ್ಲದೇ, ತಮಿಳುನಾಡು, ಕೇರಳ, ಗುಜರಾತ್, ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೂ ಕಸ್ತೂರಿ ರಂಗನ್ ವರದಿ ಅನ್ವಯವಾಗುತ್ತದೆ.‌ ಕನಾ೯ಟಕ ಸರಕಾರವು ಕಸ್ತೂರಿ ರಂಗನ್ ವರದಿ ಸಂಬಂಧ ಆಯಾ ಗ್ರಾಮಗಳಿಗೆ ತೆರಳಿ ಜನರ ಅಹವಾಲು ಆಲಿಸಿ ಕೇಂದ್ರಕ್ಕೆ ಮನವಿ ನೀಡಿತ್ತು. ಕೆಲವು ರಾಜ್ಯಗಳಂತೂ ಇದ್ಯಾವುದನ್ನು ಮಾಡಲಿಲ್ಲ. ಹಾಗೆಯೇ ಕರ್ನಾಟಕ, ಕೇರಳ ಬಿಟ್ಟು ಮತ್ತ್ಯಾವ ರಾಜ್ಯ ಕೇಂದ್ರಕ್ಕೆ ಯಾವುದೇ ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ.

ಕರ್ನಾಟಕ ಮನವಿಗಿಲ್ಲ ಸ್ಪಂದನೆ

ಕರ್ನಾಟಕ ಮನವಿಗಿಲ್ಲ ಸ್ಪಂದನೆ

ಕರ್ನಾಟಕದ ಮನವಿಗೆ ಉತ್ತರಿಸದ ಕೇಂದ್ರ ಸರ್ಕಾರ , ಕೇರಳದ ಆಕ್ಷೇಪಣೆಯನ್ನು ಮನ್ನಿಸಿ ಅಲ್ಲಿನ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಕರ್ನಾಟಕದ ವಾದ ಏನಂದರೆ, ಕಸ್ತೂರಿ ರಂಗನ್ ವರದಿಯನ್ನು ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಬೇಕೆಂಬುದಾಗಿದೆ. ಇದನ್ನ ರಾಜ್ಯ ಸರ್ಕಾರ ವರದಿಯಲ್ಲಿ ಕೂಡಾ ತಿಳಿಸಿತ್ತು.[ಮಂಗಳೂರು ಭಟ್ಕಳ ನಡುವೆ ಹೊಸ ವೋಲ್ವೋ ಬಸ್]

19ಕಿ.ಮೀವರೆಗೆ ನಿರ್ಬಂಧ

19ಕಿ.ಮೀವರೆಗೆ ನಿರ್ಬಂಧ

ಕೇಂದ್ರ ಸರ್ಕಾರ ‘ಪರಿಸರ ಸೂಕ್ಷ್ಮ' ಎಂದು ಘೋಷಿಸಿದ ಪ್ರದೇಶದಲ್ಲಿ ಮುಂದೆ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸಲು ಅನುಮತಿ ಇಲ್ಲ. ಒಂದು ವೇಳೆ ಇಂತಹ ಪ್ರಯತ್ನ ಮಾಡಿದರೇ ಅದು ಕಾನೂನು ಬಾಹಿರವಾಗುತ್ತದೆ. ಅಷ್ಟೇ ಅಲ್ಲ, ಆ ಭೂಮಿಯನ್ನು ಮಾರಾಟ ಮಾಡುವಂತಿಲ್ಲ. ಅಲ್ಲಿ ಮನೆ ನಿರ್ಮಾಣ ಮಾಡುವಂತಿಲ್ಲ. ಇದರ ಜೊತೆಗೆ ಇಂತಹ ಸೂಕ್ಷ್ಮ ಪ್ರದೇಶಗಳಿಂದ 19 ಕಿ.ಮೀ ವ್ಯಾಪ್ತಿಯವರೆಗೆ ನಿರ್ಬಂಧ ವಿಧಿಸಲಾಗಿದೆ.

20,668 ಹೆಕ್ಟೇರ್ ಪರಿಸರ ಸೂಕ್ಷ್ಮ

20,668 ಹೆಕ್ಟೇರ್ ಪರಿಸರ ಸೂಕ್ಷ್ಮ

ಕಸ್ತೂರಿ ರಂಗನ್ ವರದಿಯಂತೆ ರಾಜ್ಯದಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು 'ಪರಿಸರ ಸೂಕ್ಷ್ಮ' ಪ್ರದೇಶ ಎಂದು ಗುರುತಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಟ್ಟು 44,44 ಚದರ ಕಿ.ಮೀ. ಪಶ್ಚಿಮ ಘಟ್ಟ ವ್ಯಾಪಿಸಿಕೊಂಡಿದೆ. ಬೆಳಗಾವಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಭಾಗಶ: ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Forest and Environment Minister B Ramanatha Rai said that Karnataka government will approach central government regarding the second draft notification of Kasturirangan report for preservation of the Western Ghats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more