ಉಳ್ಳಾಲ ಬ್ಲಾಕ್ ಬಳಿ ಕಾಂಗ್ರೆಸ್ ಮುಖಂಡ ಹಣದ ಸಮೇತ ವಶಕ್ಕೆ
ಮಂಗಳೂರು, ಮೇ 12: ಕಾಂಗ್ರೆಸ್ ಮುಖಂಡರ ಕಾರಿನಿಂದ ಅಕ್ರಮ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಪಿಲಾರ್ ಲಕ್ಷ್ಮೀ ಗುಡ್ಡೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಉಳ್ಳಾಲ ಬ್ಲಾಕ್ ಸಂತೋಷ್ ಶೆಟ್ಟಿ ಅವರಿಂದ ಹಣವನ್ನು ವಶಪಡಿಸಿಕೊಳ್ಳಳಾಗಿದೆ. ಸಂತೋಷ್ ಶೆಟ್ಟಿ ಸಚಿವ ಯು.ಟಿ.ಖಾದರ್ ಆಪ್ತ ಎಂದು ತಿಳಿದು ಬಂದಿದೆ.
ಸಂತೋಷ್ ಬೆಂಬಲಿಗರು ಕೇರಳ ನೋಂದಣಿಯ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಕಾರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ತಡೆಹಿಡಿದಿದ್ದರು. ಮನೆಮನೆಗೆ ಹಣ ವಿತರಿಸುತ್ತಿದ್ದರೆಂಬ ಆರೋಪದಡಿ ಕಾರು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದರು.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಕಾರಿನಲ್ಲಿದ್ದವರಿಂದ 25,000ರೂ. ವಶಪಡಿಸಿಕೊಂಡಿದ್ದಾರೆ. ಕಾರನ್ನು ವಶಕ್ಕೆ ಪಡೆದು ಉಳ್ಳಾಲ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದು, ಚುನಾವಣಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸಂತೋಷ್ ಶೆಟ್ಟಿ ಸೇರಿದಂತೆ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications