ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ಆಯ್ತು ಮೋದಿ ಅವರ ಈ ಡಿಜಿಟಲ್ ಪೇಂಟಿಂಗ್ ಚಿತ್ರ

By ಕಿರಣ್ ಸಿರ್ಸೀಕರ್
|
Google Oneindia Kannada News

ಮಂಗಳೂರು ಮೇ 18: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರ ಕಪ್ಪು ಬಿಳುಪಿನ ಚಿತ್ರವೊಂದು ಭಾರೀ ವೈರಲ್ ಆಗಿದೆ. ಮೋದಿ ಅವರ ಈ ಡಿಜಿಟಲ್ ಪೇಂಟಿಂಗ್ ಚಿತ್ರ ಇಷ್ಟೊಂದು ವೈರಲ್ ಆಗಲು ಕಾರಣ ಕರಣ್ ಆಚಾರ್ಯ.

ಹೌದು, ಕರಣ್ ಆಚಾರ್ಯ ರಚಿಸಿದ್ದ ವಿರಾಟ್ ಬಜರಂಗ್ ಕೇಸರಿ-ಕಪ್ಪು ವರ್ಣದ ವಿಕ್ಟರ್ ಆರ್ಟ್ ಚಿತ್ರ ದೇಶಾದ್ಯಂತ ಭಾರೀ ಪ್ರಸಿದ್ದಿ ಪಡೆದಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಮೋದಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಕಲಾವಿದ ಕರಣ್ ಆಚಾರ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿ

ಈ ವಿಚಾರದಿಂದ ಬಹಳ ಸಂತೋಷಗೊಂಡಿದ್ದ ಕರಣ್ ಆಚಾರ್ಯ ಇದೀಗ ಮೋದಿ ಅವರ ಭಾವಚಿತ್ರವನ್ನು ಕಪ್ಪು-ಬಿಳುಪು ವರ್ಣದಲ್ಲಿ ಡಿಜಿಟಲ್ ಆರ್ಟ್ ರಚಿಸಿದ್ದಾರೆ. ಈ ಚಿತ್ರವನ್ನು ಫೇಸ್ ಬುಕ್ ಹಾಗು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಧಾನಿ ಮೋದಿ ಅವರಿಗೂ ಶೇರ್ ಮಾಡಿದ್ದಾರೆ.

Karan Acharyas new digital painting art of Modi got viral in social media

ಮುಖ್ಯವಾದ ಅಂಶವೆಂದರೆ ಈ ಚಿತ್ರವನ್ನು ಕರಣ್ ಆಚಾರ್ಯ ರಾಜ್ಯ ವಿಧಾನಸಭೆ ಫಲಿತಾಂಶದ ದಿನವೇ ಪ್ರಧಾನಿ ಅವರಿಗೆ ಶೇರ್ ಮಾಡಿದ್ದರು. ತಮ್ಮ ಪೋಸ್ಟ ನಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿರುವ ಕರಣ್ ಆಚಾರ್ಯ 'ನನ್ನನ್ನು ಗಮನಿಸಿ, ನನ್ನ ಕೆಲಸ ಮೆಚ್ಚಿಕೊಂಡಿರುವುದಕ್ಕೆ ಧನ್ಯವಾದಗಳು. ಇದು ನಿಮಗೆ ನನ್ನ ಚಿಕ್ಕ ವಂದನಾ ರೂಪದ ಕೊಡುಗೆ' ಎಂದು ಬರೆದಿದ್ದಾರೆ.

ಕರಣ್ ಆಚಾರ್ಯ ಈ ಹಿಂದೆ ಆಡೋಬ್ ಫ್ಲಾಶ್ ನಲ್ಲಿ ವಿರಾಟ್ ಬಜರಂಗ್ , ಶಿವಾಜಿಯ ಕೇಸರಿ ಹಾಗು ಕಪ್ಪು ವರ್ಣದ ವಿಕ್ಟರ್ ಆರ್ಟ್ ಚಿತ್ರ ರಚಿಸಿದ್ದರು.

English summary
Karan Acharya the man behind viral Virat Bajarag . The Prime minister Narandra Modi praised the young graphic artist when he visited Mangaluru for election campaign. Now Karna Achaya once again in news. Now his digital painting of Prime Minister Modi got viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X