ಮಂಗಳೂರಿನಿಂದ ದೆಹಲಿಗೆ ನೇರ ಜೆಟ್ ವಿಮಾನ ಸಂಪರ್ಕ
9W763 ನಂಬರ್ ನ ಜೆಟ್ ಏರ್ ವೇಸ್ ವಿಮಾನ ಬೆಳಗ್ಗೆ 8ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, 10.50ಕ್ಕೆ ದೆಹಲಿ ತಲುಪಲಿದೆ. 9W764 ನಂಬರ್ ವಿಮಾನ ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಹೊರಡಲಿದ್ದು, 5.50ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ಮಂಗಳೂರು, ಜನವರಿ 17: : ಕರಾವಳಿ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ಹತ್ತಿರವಾಗಿವೆ. ಜೆಟ್ ಏರ್ ವೇಸ್ ಮಂಗಳೂರು-ದೆಹಲಿ ನಡುವೆ ನೇರ ವಿಮಾನ ಸೇವೆ ಆರಂಭಗೊಂಡಿದೆ.
ಜನವರಿ.16ರ ಸೋಮವಾರದಿಂದ ಮಂಗಳೂರು-ದೆಹಲಿ, ದೆಹಲಿ-ಮಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಿದೆ. 159 ಪ್ರಯಾಣಿಕರು ಸೋಮವಾರ ಮಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. 135 ಪ್ರಯಾಣಿಕರು ದೆಹಲಿಯಿಂದ ಮಂಗಳೂರಿಗೆ ಆಗಮಿಸಿದರು.

9W763 ನಂಬರ್ ನ ಜೆಟ್ ಏರ್ ವೇಸ್ ವಿಮಾನ ಬೆಳಗ್ಗೆ 8ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, 10.50ಕ್ಕೆ ದೆಹಲಿ ತಲುಪಲಿದೆ. 9W764 ನಂಬರ್ ವಿಮಾನ ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಹೊರಡಲಿದ್ದು, 5.50ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ಈ ವಿಮಾನ ಸೇವೆಯಿಂದಾಗಿ ಮಂಗಳೂರು ಮತ್ತು ರಾಷ್ಟ್ರರಾಜಧಾನಿ ಮತ್ತಷ್ಟು ಹತ್ತಿರವಾಗಿದೆ. ಇಷ್ಟು ದಿನ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನ ಸೇವೆ ಇರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಬೆಂಗಳೂರು ಅಥವ ಮುಂಬೈಗೆ ತೆರಳಿ ಅಲ್ಲಿಂದ ದೆಹಲಿ ತಲುಪಬೇಕಿತ್ತು.
ಮಂಗಳೂರಿನಿಂದ 2 ಗಂಟೆ 50 ನಿಮಿಷದಲ್ಲಿ ನೇರವಾಗಿ ದೆಹಲಿಗೆ ತೆರಳಬಹುದಾಗಿದೆ. ಈ ವಿಮಾನ ಸೇವೆಯಿಂದಾಗಿ ಜೈಪುರ, ಲಕ್ನೋ, ವಾರಣಾಸಿ, ಪಾಟ್ನಾ, ಗೌಹಾತಿ ಮುಂತಾದ ನಗರಗಳಿಗೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಿದೆ.

Click it and Unblock the Notifications