ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಡಪಕ್ಷಗಳ ಜತೆ ಸೀಟು ಹೊಂದಾಣಿಕೆ ಜೆಡಿಎಸ್ ಸಿದ್ಧ: ದೇವೇಗೌಡ

|
Google Oneindia Kannada News

ಮಂಗಳೂರು, ಜನವರಿ 22: ಒಂದು ವೇಳೆ ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಮೈತ್ರಿಗೆ ಮುಂದಾದರೆ ಅವರಿಗೆ ಕೆಲ ಸ್ಥಾನಗಳನ್ನು ಬಿಟ್ಟುಕೊಡಲು ಜೆಡಿಎಸ್ ಸಿದ್ಧವಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಫೆಬ್ರವರಿ ಮೂರನೇ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಒಂದು ವೇಳೆ ವಿಧಾನಸಭೆಯ ಚುನಾವಣೆಯ ನಂತರ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಯಾವುದೇ ಪಕ್ಷಗಳ ಜತೆ ಕೈ ಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

'ನಾನು ಮುಖ್ಯಮಂತ್ರಿಯಾಗಿದ್ದಾಗ ಲೂಟಿ ಮಾಡುತ್ತಿದ್ದವರ ಕೈಕಟ್ಟಿ ಹಾಕಿದ್ದೆ''ನಾನು ಮುಖ್ಯಮಂತ್ರಿಯಾಗಿದ್ದಾಗ ಲೂಟಿ ಮಾಡುತ್ತಿದ್ದವರ ಕೈಕಟ್ಟಿ ಹಾಕಿದ್ದೆ'

ಮೋದಿ ಬಹಳ ಬುದ್ಧಿವಂತರು, ಯಾವುದನ್ನೂ ಮಾತನಾಡುವುದಿಲ್ಲ ಕೇವಲ, ಕಾಫಿ, ಟೀ ಕೊಟ್ಟು ಸುಮ್ಮನಿರುತ್ತಾರೆ. ಮೋದಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದೇನೆ ಎಂಬ ಆರೋಪ ಇದೆ ಆದರೆ ನಾನು ಮನಸ್ಸಿಗೆ ತೋಚಿದಂತೆ ಮಾತನಾಡುವುದಿಲ್ಲ ಮೋದಿಯವರ ಹುದ್ದೆ ಬಗ್ಗೆ ನನಗೆ ಗೌರವಿದೆ ಎಂದರು.

JDS will share seats with left parties: HDD

ಈ ಹಿಂದೆ ಕಾಂಗ್ರೆಸ್ ಜೊತೆಗೂಡಿ ಕೈಸುಟ್ಟುಕೊಂಡಿದ್ದೇವೆ. 2004 ರಲ್ಲಿ 28ಸೀಟು ಇದ್ದರೂ ಏನೆಲ್ಲ ಕಷ್ಟಪಟ್ಟಿದ್ದೆವು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಮ್ಮ ಪಕ್ಷ ಅಷ್ಟು ಪ್ರಬಲವಾಗಿಲ್ಲ, ಪಕ್ಷ ಸಂಘಟನೆಗೆ ಪ್ರಯತ್ನ ಮಾಡುತ್ತಿದ್ದೇವೆ. ಫೆಬ್ರವರಿ 2 ನೇ ವಾರದಲ್ಲಿ ಮಂಗಳೂರಿನಲ್ಲಿ ದೊಡ್ಡ ಸಮಾವೇಶವನ್ನು ನಡೆಸುತ್ತೇವೆ. ಪಕ್ಷದ ಚುನಾವಣಾ ಅಭ್ಯರ್ಥಿಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

English summary
Former prime minister HD Devegowda said JDS party is thinking to share seats with left parties like CPI and CPM in upcoming elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X