ಮಂಗಳೂರು : ಚುನಾವಣೆ ವೆಚ್ಚ ಪೂಜಾರಿ ಪ್ರಥಮ
ಮಂಗಳೂರು, ಏ. 30 : ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆ ಫಲಿತಾಂಶ ಏನಾಗುತ್ತದೆ? ಎಂಬ ಕುತೂಹಲದ ನಡುವೆಯೇ, ಅಭ್ಯರ್ಥಿಗಳು ಚುನಾವಣೆಯಲ್ಲಿ ನಾವು ಎಷ್ಟು ವೆಚ್ಚ ಮಾಡಿದ್ದೇವೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಎಲ್ಲರಿಗಿಂತ ಹೆಚ್ಚು ವೆಚ್ಚ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಖರ್ಚು-ವೆಚ್ಚದ ಮಾಹಿತಿ ಸಲ್ಲಿಸಿದ್ದಾರೆ. ಆಯೋಗ ವಿಧಿಸಿದ ಗಡುವನ್ನು ಯಾವ ಅಭ್ಯರ್ಥಿಗಳು ಮೀರಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಬ್ರಮಣ್ಯ ಅವರು ಕೇವಲ 25,000 ರೂ.ಖರ್ಚು ಮಾಡಿದ್ದಾರೆ.

ಚುನಾವಣೆಗೆ ಹೆಚ್ಚು ಹಣ ವೆಚ್ಚ ಮಾಡಿರುವ ಪಟ್ಟಿಯಲ್ಲಿ 36,59,274 ರೂ. ವೆಚ್ಚ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಅವರು ಪ್ರಥಮ ಸ್ಥಾನದಲ್ಲಿದ್ದರೆ, 25,000 ರೂ. ಖರ್ಚು ಮಾಡಿರುವ ಸುಬ್ರಮಣ್ಯ ಅವರು ಕೊನೆಯ ಸ್ಥಾನದಲ್ಲಿದ್ದಾರೆ. ಅಭ್ಯರ್ಥಿಯೊಬ್ಬರಿಗೆ ಗರಿಷ್ಠ 70 ಲಕ್ಷ ರೂ. ವೆಚ್ಚ ಮಾಡಲು ಆಯೋಗ ಅವಕಾಶ ನೀಡಿತ್ತು.
ಕ್ಷೇತ್ರದ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ 28,27,248 ರೂ. ಖರ್ಚು ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಎಂ.ಆರ್. ವಾಸುದೇವ ಅವರು 12,23,592 ರೂ. ಖರ್ಚು ಮಾಡಿ ಚುನಾವಣೆ ಎದುರಿಸಿದ್ದಾರೆ. ಎಸ್ ಡಿಪಿಐ ಪಕ್ಷದ ಮಹಮ್ಮದ್ ಹನೀಫ್ 9,66,948 ರೂ. ಖರ್ಚು ಮಾಡಿದ್ದಾರೆ.
ಅಭ್ಯರ್ಥಿಗಳ ಖರ್ಚುವೆಚ್ಚದ ವಿವರ
* ಸಿಪಿಎಂ ಯಾದವ ಶೆಟ್ಟಿ - 6,97,095 ರೂ.
* ಪಕ್ಷೇತರ ಅಭ್ಯರ್ಥಿಯಾದ ಕೆ.ಎನ್. ಸೋಮಶೇಖರ್ - 1,44,112
* ಬಿಎಸ್ ಪಿಯ ಮೂಸಾ ಕುಂಞಿ - 1,02,009
* ಪಕ್ಷೇತರ ದೀಪಕ್ ರಾಜೇಶ್ ಕುವೆಲ್ಲೊ - 74,757
* ಪಕ್ಷೇತರ ಕೆ. ಕುಶಲ ಬೆಳ್ಳಾರೆ - 64,300
* ಪಕ್ಷೇತರ ಮ್ಯಾಕ್ಸಿಂ ಪಿಂಟೋ - 58,738
* ಪಕ್ಷೇತರ ಸುದತ್ತ ಜೈನ್ - 36,143
* ಪಕ್ಷೇತರ ಸುಪ್ರೀತ್ ಕುಮಾರ್ ಪೂಜಾರಿ -28,284
* ಪಕ್ಷೇತರ ಆನಂದ ಗಟ್ಟಿ - 27,750 [ಚಿತ್ರ ಮಾಹಿತಿ : Isaac Richard , Mangalore ]












Click it and Unblock the Notifications