ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರೋಪಾಡಿ ಗ್ರಾ.ಪಂ. ಚುನಾವಣೆ: ಕೊಲೆಯಾಗಿದ್ದ ಜಲೀಲ್ ಸಹೋದರನಿಗೆ ಜಯ

|
Google Oneindia Kannada News

ಮಂಗಳೂರು, ಜುಲೈ 5: ಜಲೀಲ್ ಕರೋಪಾಡಿ ಅವರ ಬರ್ಬರ ಹತ್ಯೆಯ ಬಳಿಕ ತೆರವಾಗಿದ್ದ ಬಂಟ್ವಾಳದ ಕರೋಪಾಡಿ ಗ್ರಾಮ ಪಂಚಾಯತ್ ಸ್ಥಾನದ ಉಪಚುನಾವಣೆಯಲ್ಲಿ ಅವರ ಸಹೋದರ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನ್ವರ್ ಕರೋಪಾಡಿ ಜಯ ಗಳಿಸಿದ್ದಾರೆ.

ಅನ್ವರ್ ಕರೋಪಾಡಿ 449 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಕೋಡ್ಲ 321 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಒಟ್ಟು 791 ಮತಗಳು ಚಲಾವಣೆಯಾಗಿದ್ದು, ಅವುಗಳ ಪೈಕಿ 21 ಮತಗಳು ತಿರಸ್ಕೃತವಾಗಿವೆ ಎಂದು ಬಂಟ್ವಾಳ ತಾಲೂಕು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Jaleel Karopadi's brother won the bi-election for Karopadi village panchayath

ಏಪ್ರಿಲ್ 20 ರಂದು ಬಂಟ್ವಾಳದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿಯವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ನಂತರ ಅವರ ಸ್ಥಾನಕ್ಕೆ ಜುಲೈ 2ನೇ ತಾರೀಕಿನಂದು ಚುನಾವಣೆ ನಡೆದಿತ್ತು.

English summary
Anwar Karopadi, who was the brother of brutally murdered Jaleel Karopadi, won the bi-election by 449 votes, which is held for the post of member at Karopadi village panchayath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X