ಮಂಗಳೂರಿನಲ್ಲಿ ಮರಿ ವಿಜ್ಞಾನಿಗಳ ಪ್ರತಿಭಾ ಪ್ರದರ್ಶನ
ಮಂಗಳೂರು, ಆ.6 : ಸೌರ ಶಕ್ತಿಯಿಂದ ಬಿಸಿನೀರು ಕಾಯಿಸುವ ವ್ಯವಸ್ಥೆ, ಫ್ಲೈ ಓವರ್ ಮೇಲೆ ವಾಹನ ಹತ್ತಿ ಇಳಿದರೆ ಉರಿಯುವ ಬೀದಿ ದೀಪ, ಪಾತ್ರೆ ತೊಳಯಲು ಬಂತು ಯಂತ್ರ, ಘನ ತಾಜ್ಯಾ ವಿಲೇವಾರಿಗೆ ಹೊಸ ವ್ಯವಸ್ಥೆ, ಬಟ್ಟೆ ತೊಳೆಯುವ ಕೆಲಸ ಸುಲಭವಾಗಿಸುವ ಯಂತ್ರವನ್ನು ನಮ್ಮ ಭವಿಷ್ಯದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮಂಗಳೂರಿನಲ್ಲಿ ಯಂತ್ರಗಳ ನಾಲ್ಕು ದಿನಗಳ ಪ್ರದರ್ಶನ ನಡೆಯುತ್ತಿದೆ.
ಮಂಗಳೂರಿನ ಬೋಂದೆಲ್ ನ ಮಹಾತ್ಮಾಗಾಂಧಿ ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆರಂಭವಾದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿಗಳ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮ 'ಇನ್‌ಸ್ಪೈರ್ ಅವಾರ್ಡ್ 2014'ನಲ್ಲಿ ಸುಮಾರು 300 ಹೊಸ ಆವಿಷ್ಕಾರಗಳನ್ನು ಮಕ್ಕಳು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್ ಮಂಗಳೂರು ಜಂಟಿಯಾಗಿ ಆಯೋಜಿಸಿರುವ ಈ 'ಇನ್‌ಸ್ಪೈರ್ ಅವಾರ್ಡ್ 2014' ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನಾಲ್ಕು ದಿನಗಳ ಈ ವಿಜ್ಞಾನ ವಸ್ತು ಪ್ರದರ್ಶನ ಸೋಮವಾರ ಆರಂಭಗೊಂಡಿದ್ದು, ಗುರುವಾರದ ತನಕ ನಡೆಯಲಿದೆ.
ಸೋಮವಾರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಸಚಿವ ರಮಾನಾಥ್ ರೈ ಮಕ್ಕಳು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ. ಶಾಸಕರಾದ ಮೊಯಿದ್ದೀನ್ ಬಾವಾ, ಶಕುಂತಲಾ ಶೆಟ್ಟಿ, ಮಂಗಳೂರು ಜಿಲ್ಲಾಧಿಕಾರಿ ಇಬ್ರಾಹಿಂ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರದರ್ಶನದ ಚಿತ್ರಗಳು

ಸೋಲಾರ್ ವಾಟರ್ ಹೀಟರ್
ಪ್ರದರ್ಶನದಲ್ಲಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಶ್ವಿನಿ ಸಿದ್ಧ ಪಡಿಸಿದ 'ಸೋಲಾರ್ ರಿಫ್ಲೆಕ್ಟೆಡ್ ವಾಟರ್ ಹೀಟರ್' ಎಲ್ಲರ ಗಮನಸೆಳೆಯುತ್ತಿತ್ತು. ಕೇಬಲ್ ಬಾಣಲೆಯ ಮೇಲೆ ಗಾಜಿನ ಚೂರುಗಳನ್ನು ಹಾಕಿ ಸೂರ್ಯನ ಬೆಳಕನ್ನು ಅಲ್ಯುಮಿನಿಯಂ ವಾಹಕದ ಮೂಲಕ ಬಿಸಿಯನ್ನು ಹೀರಿ ಅದರ ಮೂಲಕ ನೀರು ಕಾಯಿಸಬಹುದು ಎಂದು ಅಶ್ವಿನಿ ವಿವರಣೆ ನೀಡಿದರು.

ಬೀದಿ ದೀಪ ಬೆಳಗಲು ಹೊಸ ವ್ಯವಸ್ಥೆ
ಪ್ರದರ್ಶನದಲ್ಲಿ ಫ್ಲೈ ಓವರ್ ಮೇಲೆ ವಾಹನ ಹತ್ತಿ ಇಳಿದರೆ ಬೀದಿದೀಪ ಉರಿಯುವ ಮಾದರಿಯನ್ನು ವಿದ್ಯಾರ್ಥಿಯೊಬ್ಬ ಸಿದ್ಧಪಡಿಸಿದ್ದಾನೆ.

ಪಾತ್ರೆ ತೊಳಯಲು ಎಷ್ಟು ಸುಭಲ ಗೊತ್ತೆ
8ನೇ ತರಗತಿ ವಿದ್ಯಾರ್ಥಿನಿ ರಫಿಯಾ ಎಂಬುವವರು ಪಾತ್ರೆ ತೊಳೆಯುವ ಯಂತ್ರದ ಮಾದರಿ ತಯಾರಿಸಿದ್ದಾರೆ.

ಗಿಡಗಳನ್ನು ಮಳೆಯಿಂದ ರಕ್ಷಿಸಿ
ಉಪ್ಪಿನಂಗಡಿಯ ಶ್ರೀರಾಮ ಕುಂಜೇಶ್ವರ ಶಾಲೆಯ ಚರಿಕ ಎಂಬ ವಿದ್ಯಾರ್ಥಿ ಮಳೆಯಿಂದ ನರ್ಸರಿಯಲ್ಲಿರುವ ಗಿಡಗಳು ಹಾಳಾಗದಂತೆ ಮಾಡಲು ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ. ಒಂದು ಸ್ವಿಚ್ ಒತ್ತಿದರೆ ಸಾಕು ಗಿಡಗಳ ಮೇಲೆ ಪ್ಲಾಸ್ಟಿಕ್ ಪರದೆ ಬೀಳುತ್ತದೆ. ಮಳೆಯಿಂದ ಗಿಡ ಹಾಳಾಗುವುದಿಲ್ಲ.

ಮಾದರಿ ಬಸ್ ನಿಲ್ದಾಣ ಹೀಗಿರಬೇಕು
ಇನ್‌ಸ್ಪೈರ್ ಅವಾರ್ಡ್ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬಳು ಮಾದರಿ ಬಸ್ ನಿಲ್ದಾಣ ಹೇಗಿರಬೇಕು ಎಂಬ ಬಗ್ಗೆ ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ.

ಗುರುವಾರದ ವರೆಗೆ ಪ್ರದರ್ಶನ
ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್ ಮಂಗಳೂರು ಜಂಟಿಯಾಗಿ ಆಯೋಜಿಸಿರುವ ಈ 'ಇನ್‌ಸ್ಪೈರ್ ಅವಾರ್ಡ್ 2014' ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನಾಲ್ಕು ದಿನಗಳ ಈ ವಿಜ್ಞಾನ ವಸ್ತು ಪ್ರದರ್ಶನ ಸೋಮವಾರ ಆರಂಭಗೊಂಡಿದ್ದು, ಗುರುವಾರದ ತನಕ ನಡೆಯಲಿದೆ.

300 ಆವಿಷ್ಕಾರಗಳು
ಮೂರು ದಿನದ ಈ ಪ್ರದರ್ಶನದಲ್ಲಿ 300 ಹೊಸ ಆವಿಷ್ಕಾರಗಳನ್ನು ಮಕ್ಕಳು ಸಿದ್ಧಪಡಿಸಿ ಇಟ್ಟಿದ್ದಾರೆ.











Click it and Unblock the Notifications