ಮಂಗಳೂರು : ಜೈಲಲ್ಲಿ ಮಾರಾಮಾರಿ, ಇಂದು ಕೈದಿ ಪರಾರಿ
ಮಂಗಳೂರು, ನವೆಂಬರ್ 03 : ಮಂಗಳವಾರ ಬೆಳಗ್ಗೆ ಮಂಗಳೂರು ಜೈಲಿನಿಂದ ಕೈದಿಯೊಬ್ಬ ಪರಾರಿಯಾಗಿದ್ದಾನೆ. ಸೋಮವಾರ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರು ಕೈದಿಗಳನ್ನು ಹತ್ಯೆ ಮಾಡಲಾಗಿತ್ತು.
ಜೈಲಿನಿಂದ ಪರಾರಿಯಾದ ಕೈದಿಯನ್ನು ಬಂಟ್ವಾಳ ಮೂಲದ ಬಶೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಉಳ್ಳಾಲದಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಬಶೀರ್ ಐದು ತಿಂಗಳಿನಿಂದ ಜೈಲಿನಲ್ಲಿದ್ದ. ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾನೆ. [ಮಂಗಳೂರು ಜೈಲಲ್ಲಿ ಹತ್ಯೆಯಾದವರು ಯಾರು?]

ಸೋಮವಾರ ಬೆಳಗ್ಗೆ ಜೈಲಿನಲ್ಲಿ ನಡೆದ ಮಾರಾಮಾರಿಯಲ್ಲಿ ಮಾಡೂರು ಯೂಸೂಫ್, ಗಣೇಶ್ ಶೆಟ್ಟಿ ಎಂಬ ಕೈದಿಗಳನ್ನು ಹತ್ಯೆ ಮಾಡಲಾಗಿತ್ತು, 6 ಕೈದಿಗಳು ಗಾಯಗೊಂಡಿದ್ದರು. ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. [ಮಂಗಳೂರು : ಜೈಲಲ್ಲಿ ಮಾರಾಮಾರಿ, ಇಬ್ಬರ ಹತ್ಯೆ]

ಆದರೆ, ಇಂದು ಮುಂಜಾನೆ ಕೈದಿ ಪರಾರಿಯಾಗಿರುವುದು ಜೈಲಿನ ಭದ್ರತೆ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಸೋಮವಾರ ಗಾಯಾಳು ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸುವಾಗಲೇ ಬಶೀರ್ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಕೈದಿಯನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.












Click it and Unblock the Notifications