ಶ್ವಾಸಕೋಶದೊಳಗೆ ಹಾಲು ಹೋಗಿ ಹತ್ತು ತಿಂಗಳ ಮಗು ಸಾವು

ಮಂಗಳೂರು, ಜುಲೈ 4: ಹಾಲು ಕುಡಿಯುವಾಗ ಶ್ವಾಸಕೋಶದೊಳಗೆ ಹಾಲು ಹೋಗಿ ಉಸಿರುಗಟ್ಟಿ ಮಗು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಮಿಯ್ಯಾರು ಗ್ರಾಮದ ಕಾಜರಬೈಲುವಿನಲ್ಲಿ ನಡೆದಿದೆ.

Recommended Video

      DK Shivakumar should have been more responsible says AAP | Congress | Oneindia Kannada

      ಜುಲೈ 1ರಂದು ಮಗು ಸಾವನ್ನಪ್ಪಿದ್ದು, ಕೊರೊನಾ ಸೋಂಕಿನ ಅನುಮಾನದಿಂದ ಮಗುವಿನ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಪರೀಕ್ಷೆಯ ವರದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂಬುದು ದೃಢಪಟ್ಟಿದ್ದು, ಅನುಮಾನಗಳಿಗೆ ತೆರೆ ಬಿದ್ದಿದೆ.

      ತಾಯಿಯು ಮಗುವಿಗೆ ಹಾಲು ಕುಡಿಸುವ ಸಂದರ್ಭದಲ್ಲಿ ಅನ್ನನಾಳಕ್ಕೆ ಸೇರಬೇಕಾಗಿದ್ದ ಹಾಲು ನೇರವಾಗಿ ಶ್ವಾಸಕೋಶದೊಳಗೆ ಹೋಗಿದೆ. ಇದರಿಂದ ಮಗು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೆ ಕೇಶವಪುರದವರಾದ ದಂಪತಿ ಮಿಯ್ಯಾರು ಕಾಜರಬೈಲು ಎಂಬಲ್ಲಿ ನೆಲೆಸಿದ್ದರು. ಏಪ್ರಿಲ್ ನಲ್ಲಿ ಊರಿಗೆ ಹೋಗಿ ಕೆಲ ದಿನಗಳ ಹಿಂದೆ ಮರಳಿ ಕಾರ್ಕಳಕ್ಕೆ ಬಂದಿದ್ದರು.

      Infant Dies By Milk Stucks In Lungs At Karkala Of Mangaluru

      ಜೂನ್ 28ರ ರಾತ್ರಿ ಹತ್ತು ತಿಂಗಳ ಮಗುವಿನಲ್ಲಿ ಜ್ವರ ಕಾಣಿಸಿಕೊಂಡು ಉಸಿರಾಟದ ತೊಂದರೆಯಾದ್ದರಿಂದ ಮರುದಿನ ಕಾರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೀಗಾಗಿ ಮೃತ ಮಗುವಿನ ಗಂಟಲದ್ರವವನ್ನು ಪರೀಕ್ಷೆ ನಡೆಸಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+