ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಇತಿಹಾಸ ಮತ್ತು ಪುರಾತತ್ವ ಎಂ.ಎ., ಆರಂಭ

ಮಂಗಳೂರು, ಜೂನ್ 18: ಮಂಗಳೂರು ವಿಶ್ವವಿದ್ಯಾನಿಲಯ ಪ್ರಸ್ತುತ ವರ್ಷದಿಂದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಎಂ.ಎ., ಪದವಿ ಆರಂಭಿಸಿದೆ. ದೇಶದ ಕೆಲವೇ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಇತಿಹಾಸ ಅಧ್ಯಯನದ ಜೊತೆಗೆ ಉದ್ಯೋಗಕ್ಕೆ ಪೂರಕವಾಗಿರುವ ಪುರಾತತ್ವ ವಿಷಯವನ್ನು ಬೋಧಿಸಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಪುರಾತತ್ವ ಶಾಸ್ತ್ರವು ಒಂದು ವೈಜ್ಞಾನಿಕ ವಿಷಯವಾಗಿ ಬೆಳೆಯುತ್ತಿದೆ. ಇದರ ಮೂಲ ಉದ್ದೇಶ ಮಾನವನ ವಿಕಾಸ ಕ್ರಮದಲ್ಲಿ ಸಾಧನೆಗಳ ಏರಿಳಿತಗಳು, ಅವುಗಳ ಕಾರಣ, ಪರಿಣಾಮಗಳನ್ನು ಅಧ್ಯಯನ ಮಾಡುವುದಾಗಿದೆ. ಈ ರೀತಿ ಮಾನವ ಸಂಸ್ಕೃತಿಯ ಉತ್ಪತ್ತಿ ಮತ್ತು ವಿಕಾಸಗಳಗಳಲ್ಲಿ ಪರಿಸರದ ಪಾತ್ರ ಹಾಗೂ ಪರಿಸರದಲ್ಲುಂಟಾದ ಬದಲಾವಣೆಗಳು ಈ ಅಧ್ಯಯನ ವ್ಯಾಪ್ತಿಯಲ್ಲಿ ಬರುತ್ತವೆ.

ಭಾರತದಲ್ಲಿ ಅದೆಷ್ಟೋ ಇತಿಹಾಸ ಪಂಡಿತರಿದ್ದರೂ ಪ್ರಾಚ್ಯವಸ್ತುಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ ಕೀರ್ತಿ ವಿದೇಶೀಯರಿಗೆ ಸಲ್ಲುತ್ತದೆ. 1784ರಲ್ಲಿ ಸರ್‍ ವಿಲಿಯಂ ಜೋನ್ಸ್ ಬಂಗಾಳದಲ್ಲಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದ ನಂತರ ಭಾರತದಲ್ಲಿ ಪುರಾತತ್ವ ಅಧ್ಯಯನಕ್ಕೆ ನೆಲೆ ಸಿಕ್ಕಿತು.

History and Archeology M.A., course starts in Mangaluru VV Hampanakatte VV college from this year

1861ರಲ್ಲಿ ಭಾರತೀಯ ಪುರಾತನ ಸರ್ವೇಕ್ಷಣಾ ಇಲಾಖೆ ಆರಂಭಗೊಂಡಿತು. ಭೂ ಅನ್ವೇಷಣೆ, ಉತ್ಖನನ, ಮ್ಯೂಸಿಯಂ, ಕಲಾ ಸಂರಕ್ಷಣೆ ಮೊದಲಾದವುಗಳನ್ನು ಶಾಸ್ತ್ರೀಯವಾಗಿ ಅಧ್ಯಯನಕ್ಕೆ ಒಳಪಡಿಸಲು ಆರಂಭಿಸಲಾಯಿತು.

ಪ್ರವಾಸೋದ್ಯಮ ಬೆಳೆಯುತ್ತಿರುವ ಕರಾವಳಿಯಲ್ಲಿ ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಿಸಿದ ಕೆಲಸಗಳಿಗೆ, ಸಂಶೋಧನೆಗೆ ಅವಕಾಶವಿದೆ. ಇತಿಹಾಸದ ವಿವಿಧ ವಿಭಾಗಗಳಲ್ಲಿ ಪಾಂಡಿತ್ಯ ಗಳಿಸಿರುವ ಪ್ರಾಧ್ಯಾಪಕರು ಮತ್ತು ಸಂಶೋಧನಾ ಗ್ರಂಥಗಳಿರುವ ಅತ್ಯುತ್ತಮ ಗ್ರಂಥಾಲಯವಿದೆ.

ಎಲ್ಲದಕ್ಕಿಂತ ಮಿಗಿಲಾಗಿ ಭಾರತೀಯ ಪುರಾತನ ಸರ್ವೇಕ್ಷಣಾ ಇಲಾಖೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು, ಕೆಪಿಎಸ್ ಸಿ ಮತ್ತು ಯುಪಿಎಸ್ ಸಿ, ಸಂಶೋಧನಾ ಸಂಸ್ಥೆಗಳು, ಪ್ರವಾಸ ಮಾರ್ಗದರ್ಶಕ ಹೀಗೆ ಹೇರಳ ಉದ್ಯೋಗಾವಕಾಶಗಳು ಪದವಿಯನ್ನು ಆಕರ್ಷಕವನ್ನಾಗಿಸಿವೆ. ಆಸಕ್ತರು ವಿವಿ ಕಾಲೇಜಿನ ಸ್ನಾತಕೋತ್ತರ ವಿಭಾಗವನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+