ಮಂಗಳೂರಿನಲ್ಲಿ ಮಾರ್ಚ್ 1ರಂದು ಹಿಂದೂ ಸಮಾಜೋತ್ಸವ
ಮಂಗಳೂರು, ಫೆ. 24 : ಮಂಗಳೂರು ವಿಶ್ವಹಿಂದೂ ಸಮಾಜೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಮಂಗಳವಾರ ಸಮಾಜೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 1ರಂದು ಸಮಾಜೋತ್ಸವ ನಡೆಯಲಿದೆ.
ವಿಶ್ವ ಹಿಂದೂ ಪರಿಷತ್‌ನ ಸ್ವರ್ಣ ಜಯಂತಿ ಅಂಗವಾಗಿ ಮಾ.1ರಂದು ಮಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ. ಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ರೋಟರಿ ಕ್ಲಬ್ ಮಾಜಿ ಗವರ್ನರ್ ಡಾ. ದೇವದಾಸ್ ರೈ ಬಿಡುಗಡೆ ಮಾಡಿದ್ದಾರೆ. [ಬೆಂಗಳೂರಿನಲ್ಲಿ ಡಾ. ತೊಗಾಡಿಯಾ ಭಾಷಣದ ಪೂರ್ಣಪಾಠ]

ಹಿಂದೂ ಸಮಾಜೋತ್ಸವದ ಕುರಿತು ಸಮಾಜೋತ್ಸವ ಸಮಿತಿಯ ಗೌರವಾಧ್ಯಕ್ಷ ಗಣೇಶ್ ರಾವ್ ಅವರು ಮಾಹಿತಿ ನೀಡಿದ್ದು, ದೇಶವೇ ಮಂಗಳೂರಿನತ್ತ ತಿರುಗಿ ನೋಡುವಷ್ಟು ಅದ್ದೂರಿಯಾಗಿ ಕಾನೂನು ಚೌಕಟ್ಟಿನಲ್ಲಿ ಹಿಂದೂ ಸಮಾಜೋತ್ಸವವನ್ನು ನಡೆಸಲಿದ್ದೇವೆ ಎಂದು ಹೇಳಿದ್ದಾರೆ. [ತೊಗಾಡಿಯಾ ಮೇಲೆ ಮೂರು ಕೇಸು ದಾಖಲು]
ಈಗಾಗಲೇ 3000 ಕಾರ್ಯಕರ್ತರು ಸಮಾಜೋತ್ಸವ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ. ಕಾರ್ಯಕ್ರಮದಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಶಾಂತಿಯುತವಾಗಿ ಸಮಾಜೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಗಣೇಶ್ ರಾವ್ ಮನವಿ ಮಾಡಿದರು.
ಸಮಾಜೋತ್ಸವದ ಅಧ್ಯಕ್ಷತೆಯನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು, ಪರಮ ಪೂಜ್ಯ ವಿಶ್ವೇಶ ತೀರ್ಥ ಸ್ವಾಮೀಜಿಗಳು ಆರ್ಶೀವಚನ ನೀಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಸಾದ್ವಿ ಬಾಲಿಕಾ ಸರಸ್ವತೀಜೀಯವರು ಮಾಡಲಿದ್ದಾರೆ.












Click it and Unblock the Notifications