• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 22ನೇ ಸ್ಥಾನ

|

ಮಂಗಳೂರು, ಜೂನ್ 14: ಪ್ರತಿಷ್ಠಿತ 'ವೀಕ್' ನಿಯತಕಾಲಿಕೆಯು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಭಾರತದ ಅತ್ಯುನ್ನತ ವಿಜ್ಞಾನ ಕಾಲೇಜುಗಳ ಪೈಕಿ 22ನೇ ಸ್ಥಾನವನ್ನು ನೀಡಿದೆ. ರಾಷ್ಟ್ರಮಟ್ಟದಲ್ಲಿ 317 ಸಂಯೋಜಿತ ಅಂಕಗಳಿಂದ 22ನೇ ಸ್ಥಾನವನ್ನು ಕಾಲೇಜು ತನ್ನದಾಗಿಸಿಕೊಂಡಿದೆ. ಮಾನವಶಾಸ್ತ್ರ ವಿಭಾಗದಲ್ಲಿ 274 ಸಂಯೋಜಿತ ಅಂಕಗಳೊಂದಿಗೆ 44ನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ರಾಜ್ಯಕ್ಕೆ 4ನೇ ಅತ್ಯುನ್ನತ ವಿಜ್ಞಾನ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ.

ಭಾರತದಲ್ಲಿ ಉನ್ನತ ಕಾಲೇಜುಗಳಿಗೆ ಸಂಬಂಧಿಸಿದಂತೆ ನಡೆಯುವ ಸಮೀಕ್ಷೆ 'ವೀಕ್- ಹನ್ಸ್ ಸರ್ವೆ ಫಾರ್ ಬೆಸ್ಟ್ ಕಾಲೇಜಸ್ ಇನ್ ಇಂಡಿಯಾ'ದಲ್ಲಿ ನಿರಂತರವಾಗಿ ಐದು ವರ್ಷಗಳಿಂದ ಸಂತ ಅಲೋಶಿಯಸ್ ಕಾಲೇಜು ಉನ್ನತ ಶ್ರೇಣಿಯನ್ನು ಕಾಯ್ದುಕೊಂಡು ಬಂದಿದೆ.

625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ....

ವಿದ್ಯಾರ್ಥಿ-ಅಧ್ಯಾಪಕರ ಅನುಪಾತ, ವಿದ್ಯಾರ್ಥಿಗಳ ಗುಣಮಟ್ಟ, ಕಾಲೇಜಿನ ಮೂಲ ಸೌಕರ್ಯ, ಪ್ರಾಧ್ಯಾಪಕರ ಶೈಕ್ಷಣಿಕ ಅರ್ಹತೆ, ನೇಮಕ ಮತ್ತು ಸಂಶೋಧನಾ ಅನುಭವ ಮೊದಲಾದ ಮಾನದಂಡಗಳನ್ನು ಪರಿಗಣಿಸಿ ಸ್ಥಾನಮಾನ ನೀಡಲಾಗುತ್ತದೆ. ವಾಸ್ತವಿಕ ಹಾಗೂ ಗ್ರಹಿಕಾ ಅಂಕದ ಮೇಲೆ ಸ್ಥಾನವು ಅವಲಂಬಿತವಾಗಿರುತ್ತದೆ. ಕಾಲೇಜಿನ ಮಾಹಿತಿಯನ್ನು ಕಲೆ ಹಾಕಿ, ವಾಸ್ತವಿಕ ಅಂಕ ನೀಡಿದರೆ, ಶೈಕ್ಷಣಿಕ ತಜ್ಞರು, ಉನ್ನತ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಅಭಿಪ್ರಾಯದ ಮೇರೆಗೆ ಗ್ರಹಿಕಾ ಅಂಕಗಳನ್ನು ನಿರ್ಧರಿಸಲಾಗುತ್ತದೆ.

ಈ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಹನ್ಸಾ ದಿ ವೀಕ್ ಮತ್ತು ಇಂಡಿಯಾ ಟುಡೇ ಮ್ಯಾಗಜಿನ್ ಸಹಯೋಗದೊಂದಿಗೆ ಕಾರ್ಯಚರಿಸುತ್ತಿರುವ ಎಂಡಿಆರ್ ಎ ಮತ್ತು ಎಂ ಎಚ್‍ಆರ್ ಡಿಯ ಎನ್ ಐಆರ್ ಎಫ್ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಕುರಿತ ಬಹು ಮುಖ್ಯವಾದ ವಾರ್ಷಿಕ ಸರ್ವೆಗಳಲ್ಲಿ 40000ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಹೆಸರು ಸೇರಿರುವುದು ಸಂಸ್ಥೆಗೆ ಹಿರಿಮೆ.

ಇಂಡಿಯಾ ಟುಡೇ ನಡೆಸಿದ ಎಂಡಿಆರ್ ಎ ಸರ್ವೆಯಲ್ಲಿ ಕೂಡ ಅಲೋಶಿಯಸ್ ಕಾಲೇಜು ಹಲವು ವಿಭಾಗಗಳಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದೆ. ಅಖಿಲ ಭಾರತ ಮಟ್ಟದಲ್ಲಿ ಸಮಾಜ ಕಾರ್ಯದಲ್ಲಿ 19, ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ)ಗೆ 21, ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ 33, ವ್ಯವಹಾರೋದ್ಯಮದಲ್ಲಿ 40, ವಿಜ್ಞಾನದಲ್ಲಿ 46, ಕಲಾ ವಿಭಾಗದಲ್ಲಿ 50, ವಾಣಿಜ್ಯ ವಿಭಾಗದಲ್ಲಿ 65ನೇ ಸ್ಥಾನವನ್ನು ಪಡೆದುಕೊಂಡಿದೆ.

ನಾಟಕದ ನಡುವೆ ಪರೀಕ್ಷೆ ಬರೆದು ರಾಜ್ಯಕ್ಕೆ 7ನೇ Rank ಪಡೆದ ಸಿಂಚನಾ

ಹಾಗೆಯೇ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಡೆಸಿದ ಎನ್ ಐಆರ್ ಸಮೀಕ್ಷೆಯಲ್ಲೂ ಕಾಲೇಜು 100 ರಿಂದ 150ರ ನಡುವಿನ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಸ್ಥಾನ ಪಡೆದ ಏಕೈಕ ಕಾಲೇಜಾಗಿ ಹೆಸರು ಗಳಿಸಿತ್ತು. ಇಡೀ ಕರ್ನಾಟಕ ರಾಜ್ಯದಲ್ಲಿ ಉನ್ನತ ಸ್ಥಾನ ಪಡೆದ ಮೂರು ಕಾಲೇಜುಗಳಿಗೆ ಪೈಕಿ ಅಲೋಶೀಯಸ್ ಕೂಡ ಒಂದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
HIGHER RANK FOR ST ALOYSIUS COLLEGE IN ALL INDIA LEVEL revealed by THE WEEK AND INDIA TODAY SURVEY. The reputed journal 'The Week' has ranked St Aloysius College (Autonomous), Mangaluru at 22 among the Best Science Colleges in India. At the state level the college is ranked at 4 in the science stream.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more