ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೂಳೂರಿನ ಕಮಾನು ಸೇತುವೆ ಮೇಲೆ ಬೃಹತ್ ವಾಹನ ಸಂಚಾರ ನಿಷೇಧ

|
Google Oneindia Kannada News

ಮಂಗಳೂರು, ಜೂನ್ 6: ಮಂಗಳೂರು ನಗರ ಪ್ರವೇಶಿಸುವ ಕಮಾನು ಸೇತುವೆ ಮೇಲೆ ಬೃಹತ್ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಕೂಳೂರಿನ ಈ ಹಳೇ ಕಮಾನು ಶಿಥಿಲಾವಸ್ಥೆಯಲ್ಲಿರುವ ಕಾರಣ ಬೃಹತ್ ವಾಹನಗಳನ್ನು ನಿರ್ಬಂಧಿಸಲಾಗಿದೆ. ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗುವವರೆಗೂ ಬದಲಿ ಮಾರ್ಗ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯಲು ಒಂದರಿಂದ ಎರಡು ವರ್ಷ ಕಾಲಾವಧಿ ಅಗತ್ಯವಿದೆ ಎನ್ನಲಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರಿಂಗ್ ವಿಭಾಗದ ಈಗಾಗಲೆ ಸ್ಪಷ್ಟನೆ ನೀಡಿದೆ. ಹೊಸ ಸೇತುವೆ ಕಾಮಗಾರಿ ಮುಗಿಯುವ ತನಕ ಬೃಹತ್ ವಾಹನಗಳು ಬದಲಿ ಮಾರ್ಗಗಳಲ್ಲಿಯೇ ಸಂಚರಿಸಲು ಸೂಚನೆ ನೀಡಲಾಗಿದೆ.

ಮಂಗಳೂರು: ಅಪಾಯ ಆಹ್ವಾನಿಸುತ್ತಿರುವ ಹೊಸಮಠ ಸೇತುವೆ!ಮಂಗಳೂರು: ಅಪಾಯ ಆಹ್ವಾನಿಸುತ್ತಿರುವ ಹೊಸಮಠ ಸೇತುವೆ!

ಭೂ ಸಾರಿಗೆ ಸಚಿವಾಲಯದ ನಿರ್ದೇಶನ ಅನ್ವಯ ಹೈದರಾಬಾದ್‌ನ ಆರ್ವಿ ಅಸೋಸಿಯೇಟ್ಸ್ ಎಂಬ ಖಾಸಗಿ ಸಂಸ್ಥೆ ಕೂಳೂರು ಸೇತುವೆ ಸ್ಥಿತಿ ಪರಿಶೀಲಿಸಿ ಬೃಹತ್ ವಾಹನಗಳ ಸಂಚಾರಕ್ಕೆ ಅಯೋಗ್ಯ ಎಂದು ಈ ಹಿಂದೆಯೇ ವರದಿ ನೀಡಿತ್ತು. ಬಳಿಕ ಭಾರತ್‌ಮಾಲಾ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿದ ತಜ್ಞರ ತಂಡ ಕೂಡ ಹಳೇ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದೆ.

 Heavy vehicles Banned on Kuluru Arch bridge

ಶಿಥಿಲಾವಸ್ಥೆಯಲ್ಲಿರುವ ಈ ಕೂಳೂರು ಸೇತುವೆಗೆ 66 ವರ್ಷಗಳ ಇತಿಹಾಸವಿದೆ. 1952ರ ಸೆಪ್ಟೆಂಬರ್.21ರಂದು ಕೂಳೂರು ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿತ್ತು. 66 ವರ್ಷದ ಹಿಂದೆ 600 ಅಡಿ ಉದ್ದದ ಈ ಸೇತುವೆಯನ್ನು ಮದ್ರಾಸ್ ಪ್ರಾಂತ್ಯದ ಸಾರ್ವಜನಿಕ ಕಾರ್ಯ ವಿಭಾಗದ ಸಚಿವ ಎನ್.ರಂಗರೆಡ್ಡಿ ಉದ್ಘಾಟಿಸಿದ್ದರು.

ಮಂಗಳೂರು: ಮೂರು ಸೇತುವೆಗಳು ಸಂಚಾರಕ್ಕೆ ಅನರ್ಹಮಂಗಳೂರು: ಮೂರು ಸೇತುವೆಗಳು ಸಂಚಾರಕ್ಕೆ ಅನರ್ಹ

ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್ ಪಿಎಲ್ ಅಥವಾ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್ ‌ಗಳು ಪಡುಬಿದ್ರಿ- ಕಾರ್ಕಳ- ಗುರುವಾಯನಕೆರೆ- ಧರ್ಮಸ್ಥಳ - ಕೊಕ್ಕಡ- ಪೆರಿಯಶಾಂತಿ ಮೂಲಕ ಸಂಚರಿಸುವವು. ಕೇರಳದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್ ‌ಗಳು ಕೆ.ಪಿ.ಟಿ.ಯಿಂದ ಕಾವೂರು- ಬಜ್ಪೆ- ಕಾನ - ಸುರತ್ಕಲ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.

English summary
report of experts confirmed that the Kulur bridge is unfit for vehicle movement. The district administration banned heavy vehicle movement on arch bridge of Kuluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X