ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ಮಳೆ ಹಿನ್ನೆಲೆ: ದ.ಕ.ದಲ್ಲಿ 2 ದಿನ ಶಾಲಾ ಕಾಲೇಜುಗಳಿಗೆ ರಜೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

Recommended Video

ಮೆಕುನು ಚಂಡಮಾರುತದಿಂದ ಮಂಗಳೂರಿಗೆ ಎಫೆಕ್ಟ್ | ಜನ ಜೀವನ ಅಸ್ತವ್ಯಸ್ತ| Oneindia Kannada

ಮಂಗಳೂರು ಮೇ 29: ಮುಂಜಾನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರಿನ ಹೆಚ್ಚಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಮಳೆ ಹಿನ್ನೆಲೆ ಇಂದು ಮತ್ತು ನಾಳೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಿ ದಕ್ಷಿಣ ಕ್ನನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ಪರಿಸ್ಥಿತಿ ನಿಗಾ ವಹಿಸಲು ಜಿಲ್ಲಾಡಳಿತದ ವತಿಯಿಂದ ದಿಂದ 10 ತಂಡಗಳ ರಚಿಸಲಾಗಿದೆ.

ಪರಿಸ್ಥಿತಿ ಅವಲೋಕನಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆಯಲಾಗಿದ್ದು, ತಾಲೂಕು ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಭಾರೀ ಮಳೆಯಿಂದ ವಿಮಾನ ರೈಲು ಸಂಚಾರದಲ್ಲಿ ಯೂ ಭಾರಿ ವ್ಯತ್ಯಯ ಉಂಟಾಗಿದೆ.

Heavy rain lashed the coastal region causing widespread damage

ಮಂಗಳೂರಿನಿಂದ ಹೊರಡುವ ರೈಲುಗಳ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಮಂಗಳೂರಿಗೆ ಬರುವ ರೈಲುಗಳು ವಿಳಂಬವಾಗಲಿದೆ. ವಿಮಾನಗಳ ಹಾರಟ ರದ್ದುಗೊಳಿಸಲಾಗಿದೆ.

In Pics: ಮಂಗಳೂರಲ್ಲಿ ಮಳೆ ತಂದ ಅವಾಂತರ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನ ಕೆಪಿಟಿ ಬಳಿ ಮನೆಯ ಮೇಲೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಮೋಹಿನಿ(50) ಎಂಬುವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

Heavy rain lashed the coastal region causing widespread damage

ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದಾರೆ. ನಗರ ಹೊರವಲಯದ ಕೃಷ್ಣಾಪುರ ಎಂಬಲ್ಲಿ ಶಾಲೆಯ ಗೋಡೆ ಕುಸಿದ ಕಾರಣ ಶಿಕ್ಷಕಿಯರಿಬ್ಬರು ಗಾಯಗೊಂಡಿದ್ದಾರೆ.

ಮಂಗಳೂರು ಭಾರಿ ಮಳೆ ಹಿನ್ನಲೆಯಲ್ಲಿ ಬೆಂಗಳೂರು ಕೋರ್ ಕಮಿಟಿ ಸಭೆ ಗೆ ಹೋಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿಗೆ ವಾಪಾಸ್ಸಾಗಿದ್ದಾರೆ. ಯಾವುದೇ ನೆರವು ಬೇಕಾದಲ್ಲಿ ತಕ್ಷಣವೇ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.

English summary
Heavy rain lashed the coastal region causing widespread damage . Because of heavy rain holiday has been declared for schools and colleges in Dakshina Kannada district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X