ಪ್ರೀತಿಯ ಮಗಳ ಸಾವಿನ ಸುದ್ದಿ ಕೇಳಿ ತಂದೆಯ ಉಸಿರು ನಿಂತುಹೋಯಿತು
ಮಂಗಳೂರು, ಅಕ್ಟೋಬರ್ 8: ಯಾರನ್ನಾದರೂ ಜೀವಕ್ಕಿಂತ ಹೆಚ್ಚು ಪ್ರೀತಿಸುವುದು ಅಂದರೆ ಇದೇ ಇರಬೇಕು. ತಂದೆ-ಮಗಳ ಬಾಂಧವ್ಯದ ವರದಿ ಇದು. ಅದರ ಅಂತ್ಯ ದುರಂತದಲ್ಲಿ ಆಗಿದೆ. ತನ್ನ ಪ್ರೀತಿಯ ಮಗಳ ಸಾವಿನ ಸುದ್ದಿ ಕೇಳಿದ ತಂದೆ ಕೂಡ ಇಹಲೋಕ ತ್ಯಜಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಉಳ್ಳಾಲದ ಹಳೆಕೋಟೆಯಲ್ಲಿ ಈ ಘಟನೆ ನಡೆದಿದ್ದು, ತಂದೆ ಮತ್ತು ಮಗಳು ಒಂದೇ ದಿನ ಮೃಪಟ್ಟಿದ್ದಾರೆ.
ಜಮೀಲಾ (38) ಎಂಬವರು 4 ದಿನಗಳಿದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಗ್ಗೆ ಆಕೆ ಮೃತಪಟ್ಟಿದ್ದರು. ಇನ್ನು ಜಮೀಲಾ ಅವರ ತಂದೆ ಯು.ಕೆ.ಮುಹಮ್ಮದ್ (80) ಕೂಡ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರಿಗೆ ಮಗಳು ಜಮೀಲಾ ಎಂದರೆ ವಿಪರೀತವಾದ ಪ್ರೀತಿ. ಆ ಕಾರಣಕ್ಕೆ ಜಮೀಲಾ ಅವರ ಸಾವಿನ ಸುದ್ದಿ ತಂದೆ ಯು.ಕೆ.ಮುಹಮ್ಮದ್ ರಿಗೆ ಕುಟುಂಬಸ್ಥರು ತಿಳಿಸಿರಲಿಲ್ಲ. ಆದರೆ ಮಗಳ ಮೃತದೇಹವು ಮನೆಗೆ ತಲುಪಿದ ಕೂಡಲೇ ಮುಹಮ್ಮದ್ ಆಘಾತಕ್ಕೆ ಒಳಗಾಗಿ, ಮೃತಪಟ್ಟಿದ್ದಾರೆ. ಕುಟುಂಬದಲ್ಲಿ ಈಗ ದುಃಖದ ಜತೆಗೆ ಮತ್ತೊಂದು ದುಃಖ. ತಂದೆ-ಮಗಳ ಪ್ರೀತಿಗೆ ಎಲ್ಲರ ಕಣ್ಣೀರೇ ಸಾಕ್ಷಿ ಹೇಳುತ್ತಿದೆ.












Click it and Unblock the Notifications