ಮಂಗಳೂರು : ಕದ್ರಿಪಾರ್ಕ್ ಅಭಿವೃದ್ಧಿಗೆ 4 ಕೋಟಿ ಅನುದಾನ
ಮಂಗಳೂರು, ಫೆ. 24 : ಮಂಗಳೂರಿನ ಕದ್ರಿಪಾರ್ಕ್ ಅಭಿವೃದ್ಧಿಗೆ ಸರ್ಕಾರ 4.97 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್ ಲೋಬೋ ಹೇಳಿದ್ದಾರೆ. ಅನುದಾನ ಬಳಸಿಕೊಂಡು ಸಂಗೀತ ಕಾರಂಜಿ, ಲೇಝರ್ ಶೋ ಮುಂತಾದ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜೆ.ಆರ್ ಲೋಬೋ ಅವರು, ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಉದ್ಯಾನವನದಲ್ಲಿ ಸಂಗೀತ ಕಾರಂಜಿ, ಲೇಝರ್ ಶೋ, ಪುಟಾಣಿ ಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಿದ್ದು 2015ರ ನವೆಂಬರ್‌ವೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಸರ್ಕಾರದ ವತಿಯಿಂದ 4.97 ಕೋಟಿ ಅನುದಾನ ಸಿಕ್ಕಿದರೂ, ಪೂರ್ಣ ಪ್ರಮಾಣದ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ದಾನಿಗಳ ಕೊಡುಗೆ ಅತ್ಯಂತ ಅವಶ್ಯಕವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.[ಮಂಗಳೂರಿನಲ್ಲಿ ಮಾರ್ಚ್ 1ರಂದು ಹಿಂದೂ ಸಮಾಜೋತ್ಸವ]
ನಿವೇಶನ ನೀಡುವ ಯೋಜನೆ ಸಿದ್ಧ : ಕಾಡುಗಳ್ಳ ವೀರಪ್ಪನ್‍ನನ್ನು ಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿವೇಶನಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ ನಿವೇಶನ ನೀಡುವ ಯೋಜನೆ ಸಾಕಷ್ಟು ಕಾಲದಿಂದ ಅನುಷ್ಠಾನವಾಗಿಲ್ಲ. ಯೋಜನೆಗೆ ಇದೀಗ ಸರ್ಕಾರದ ಮಟ್ಟದಲ್ಲಿ ವೇಗ ನೀಡಲಾಗಿದ್ದು, ಶೀಘ್ರದಲ್ಲಿ ನಿವೇಶನ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.












Click it and Unblock the Notifications