ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದ ಗೋಶಾಲೆಗಳ ಸಂಕಷ್ಟದ ಕತೆ- ವ್ಯಥೆ

ದ.ಕ. ಜಿಲ್ಲೆಗೆ ಯಾಕೆ ಅನುದಾನ ನೀಡಬೇಕು. ನಿಮ್ಮ ಜಿಲ್ಲೆಯವರು ಶ್ರೀಮಂತರು. ನಿಮಗೆ ಅನುದಾನ ಸಿಗದಿದ್ದರೂ ಪರವಾಗಿಲ್ಲ; ಬರ ಪೀಡಿತ ಉ.ಕ. ಜಿಲ್ಲೆಗಳಿಗೆ ಅದನ್ನು ಕೊಡೋಣ ಬಿಡಿ' ಎಂದು ಸಚಿವರೇ ಉದ್ಧಟತನದಿಂದ ಮಾತನಾಡಿದ್ದಾರೆೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 25: ದ.ಕ. ಜಿಲ್ಲೆಯಲ್ಲಿರುವ ಒಟ್ಟು 10 ಗೋಶಾಲೆಗಳಿಗೆ ಸರಕಾರದಿಂದ 2016-17ನೇ ಸಾಲಿಗೆ ಸೂಕ್ತ ಅನುದಾನ ದೊರೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಇಲ್ಲಿವರೆಗೆ ಕೇವಲ ಒಂದು ಗೋಶಾಲೆಗೆ ಮಾತ್ರ ಅನುದಾನ ಲಭಿಸಿದ್ದು, ಉಳಿದ ಗೋಶಾಲೆಗಳಿಗೆ ಅರ್ಜಿ ಸಲ್ಲಿಕೆ ವಿಳಂಬ ಮಾಡಿದ ಕಾರಣ ನೀಡಿ ಅನುದಾನ ತಡೆಹಿಡಿಯಲಾಗಿದೆ.

ಅರ್ಜಿ ಸಲ್ಲಿಕೆ ವಿಳಂಬವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ಗೋ ಶಾಲೆಗಳಿಗೆ ರಾಜ್ಯ ಸರಕಾರದಿಂದ ದೊರೆಯಬೇಕಾದ ಅನುದಾನಕ್ಕೆ ಈ ಬಾರಿ ಕತ್ತರಿ ಬಿದ್ದಿದ್ದು, ಈ ಗೋಶಾಲೆಗಳಲ್ಲಿರುವ ಗೋವುಗಳ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ.[ಕರಾವಳಿಯ ಪುಟಾಣಿ ಲಿಪಿಕಾ ಶೆಟ್ಟಿ 'ಲಿಟಲ್‌ ಮಿಸ್‌ ಏಷ್ಯಾ']

Goshala in Dakshina Kannada are not getting any government aids

'ಒನ್ ಇಂಡಿಯಾ' ಕನ್ನಡ ಜೊತೆಗೆ ಮಾತನಾಡಿದ ಒಕ್ಕೂಟದ ರಾಜ್ಯ ಸಂಚಾಲಕ ಕಟೀಲು ದಿನೇಶ್‌ ಪೈ ಅವರು. 'ಗೋಶಾಲೆಗಳಿಗೆ ಅನುದಾನದ ಅರ್ಜಿ ಬಗ್ಗೆ ಪಶುಸಂಗೋಪನಾ ಇಲಾಖೆ ನಮಗೆ ಸಕಾಲದಲ್ಲಿ ಮಾಹಿತಿ ನೀಡಿರಲಿಲ್ಲ. ಒಕ್ಕೂಟಗಳೇ ಅನಂತರ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದವು. ಇಲಾಖೆಯ ಅಸಮರ್ಪಕ ಮಾಹಿತಿ ಒದಗಿಸುವ ನೀತಿಯಿಂದಾಗಿಯೇ ಗೋಶಾಲೆಗಳಿಗೆ ಅನುದಾನ ಕೈತಪ್ಪಿ ಹೋಗಿದೆ ಎನ್ನುತ್ತಾರೆ.

ಜಿಲ್ಲೆಯ ಗೋಶಾಲೆಗಳಿಗೆ ಅನುದಾನ ರದ್ದುಗೊಂಡಿರುವ ಬಗ್ಗೆ ರಾಜ್ಯ ಪಶುಸಂಗೋಪನಾ ಇಲಾಖೆ ಸಚಿವ ಮಂಜು ಅವರನ್ನು ಇತ್ತೀಚೆಗೆ ನಿಯೋಗವು ಭೇಟಿ ಮಾಡಿತ್ತು. ಆಗ ಸಚಿವರು, ಸಮಸ್ಯೆ ಬಗೆಹರಿಸುವ ಬದಲು 'ದ.ಕ. ಜಿಲ್ಲೆಗೆ ಯಾಕೆ ಅನುದಾನ ನೀಡಬೇಕು. ನಿಮ್ಮ ಜಿಲ್ಲೆಯವರು ಶ್ರೀಮಂತರು. ನಿಮಗೆ ಅನುದಾನ ಸಿಗದಿದ್ದರೂ ಪರವಾಗಿಲ್ಲ; ಬರ ಪೀಡಿತ ಉ.ಕ. ಜಿಲ್ಲೆಗಳಿಗೆ ಅದನ್ನು ಕೊಡೋಣ ಬಿಡಿ' ಎಂದು ಉದ್ಧಟತನದಿಂದ ಮಾತನಾಡಿದ್ದಾರೆೆ. ಸಚಿವರ ಬೇಜವಾಬ್ದಾರಿತನ ಸರಿಯಲ್ಲ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಆರೋಪಿಸಿದ್ದಾರೆ.

Goshala in Dakshina Kannada are not getting any government aids

ಸರಕಾರದಿಂದ ಅನುದಾನ ಕೋರಿ ಜಿಲ್ಲೆಯ 10 ಗೋಶಾಲೆಗಳು ಜ. 21ರೊಳಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಈ ಬಗ್ಗೆ ಜಿಲ್ಲೆ ಗೋಶಾಲೆಗಳ ನಿರ್ವಹಣೆ ನೋಡಿಕೊಳ್ಳುವರಿಗೆ ಸಕಾಲದಲ್ಲಿ ಸರಿಯಾದ ಮಾಹಿತಿ ಲಭ್ಯವಾಗಿರಲಿಲ್ಲ. ಬಳಿಕ ಅಂದರೆ, 2017ರ ಡಿಸೆಂಬರ್‌ನಲ್ಲಿ ಕರ್ನಾಟಕ ಗೋಶಾಲೆಗಳ ಒಕ್ಕೂಟದ ವತಿಯಿಂದ ಪಶುಸಂಗೋಪನ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು.

ಆದರೆ, ಜಿಲ್ಲೆಯಿಂದ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಕೆಲವೊಂದು ಗೊಂದಲವಿತ್ತು. ಸಮಸ್ಯೆ ಬಗೆಹರಿಸಿ ಮತ್ತೆ ಅರ್ಜಿ ಸಲ್ಲಿಸುವಷ್ಟರಲ್ಲಿ ಗಡುವು ಮುಗಿದು ಹೋಗಿತ್ತು. ಅರ್ಜಿ ಸಲ್ಲಿಸಿದ ಹತ್ತು ಗೋಶಾಲೆಗಳ ಪೈಕಿ ಪುತ್ತೂರು ಸವಣೂರಿನ ಗೋಕುಲಂ ಭಾರತೀಯ ಭಾವೈಕ್ಯ ಪ್ರತಿಷ್ಠಾನದ ಗೋಶಾಲೆಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.

English summary
10 out of 9 goshala in Dakshina Kannada are not getting any government aids so far. If people ask ministers about this, ministers are giving irresponsible response for this. For this reason cows are facing problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X