• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಲ್ಡ್ ಸ್ಕೀಮ್ ಹೆಸರಲ್ಲಿ ಜನರನ್ನು ವಂಚಿಸಿ ಮಾಲೀಕ ಪರಾರಿ

|

ಮಂಗಳೂರು, ಜೂನ್ 01: ಹೆಸರಾಂತ ಆಭರಣ ಮಳಿಗೆಯಲ್ಲಿ, ಗೋಲ್ಡ್ ಸ್ಕೀಮ್ ನಡೆಸಿ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕಡಬ ಎಂಬಲ್ಲಿ ಈ ಘಟನೆ ನಡೆದಿದ್ದು ,ಇಲ್ಲಿಯ ರಾಜಧಾನಿ ಜ್ಯುವೆಲ್ಲರ್ಸ್ ಚಿನ್ನದ ಸ್ಕೀಮ್ ಹೆಸರಿನಲ್ಲಿ ನೂರಾರು ಜನರಿಗೆ ವಂಚಿಸಿದೆ.

ಚಿನ್ನ ಪರೀಕ್ಷಕನಿಂದ ಬ್ಯಾಂಕಿಗೆ 50 ಲಕ್ಷ ವಂಚನೆ

ಕಡಬದ ಹೆಸರಾಂತ ರಾಜಧಾನಿ ಜ್ಯುವೆಲ್ಲರ್ಸ್, ಜನರಿಂದ ಚಿನ್ನಾಭರಣ ಸ್ಕೀಮ್ ನಲ್ಲಿ ಹಣ ತೊಡಗಿಸುವಂತೆ ಮಾಡಿ ವಂಚನೆ ಎಸಗಿದೆ. ಗ್ರಾಹಕರಿಂದ ಚಿನ್ನ ಖರೀದಿಯ ಸಲುವಾಗಿ ಹಣಹೂಡಿಕೆ ಮಾಡಿಸಿದ್ದು, ಈ ಸ್ಕೀಮ್ ನಂಬಿ ನೂರಾರು ಜನರು ಹಣ ತೊಡಗಿಸಿದ್ದರು.

ಗೋಲ್ಡ್ ಸ್ಕೀಮ್ ನಲ್ಲಿ 2017ರಿಂದ 2019ರ ಜನವರಿವರೆಗೆ ಗ್ರಾಹಕರು ಹಣ ಹೂಡಿಕೆ ಮಾಡಿದ್ದಾರೆ. ಆದರೆ ಚಿನ್ನಾಭರಣ ಸ್ಕೀಮ್ ಮುಕ್ತಾಯವಾಗುತ್ತಿದ್ದಂತೆ ಮಳಿಗೆ ಏಕಾಏಕಿ ಬಂದ್ ಆಗಿದ್ದು, ನಾಲ್ಕು ತಿಂಗಳಿನಿಂದ ತೆರೆದಿಲ್ಲ. ನೂರಾರು ಗ್ರಾಹಕರ ಸ್ಕೀಮ್ ಹಣದೊಂದಿಗೆ ರಾಜಧಾನಿ ಜ್ಯುವೆಲ್ಲರ್ಸ್ ಮಾಲೀಕ ಪರಾರಿಯಾಗಿದ್ದಾನೆ. ಈ ಬಗ್ಗೆ ಕಡಬ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

English summary
Rajadhani Jewellery of Kadaba cheated hundreds of people in the name of gold scheme. Now case registered against Rajadhani jewellery in Kadaba station,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X