ಕಾರ್ಕಳ ಬಳಿ ಬೈಕ್ ಗೆ ಅಡ್ಡಬಂದ ಕಾಡುಕೋಣ:ಸ್ವಲ್ಪದರಲ್ಲೇ ಪಾರಾದ ಜರ್ಮನ್ ಪ್ರಜೆ
ಉಡುಪಿ, ಜನವರಿ 20: ಜರ್ಮನ್ ಪ್ರಜೆಯೊಬ್ಬ ಕಾಡುಕೋಣದ ದಾಳಿಗೆ ಒಳಗಾಗಿ ಸ್ವಲ್ಪದರಲ್ಲೇ ಪಾರಾದ ಘಟನೆ ಉಡುಪಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಭಾರತ ದರ್ಶನ ಪ್ರವಾಸಕ್ಕೆ ಬೈಕ್ ಏರಿ ಬಂದಿದ್ದ ಬಂದ ಜರ್ಮನಿ ಪ್ರಜೆ ಬೈಕ್ ನಲ್ಲಿ ಸಾಗುತ್ತಿದ್ದ ವೇಳೆ ಕಾಡುಕೋಣವೊಂದು ಅಡ್ಡ ಬಂದ ಪರಿಣಾಮ ಆತ ಗಾಯಗೊಂಡ ಘಟನೆ ಕಾರ್ಕಳದ ಮಾಳ ಎಸ್ ಕೆ ಬಾರ್ಡರ್ ಕುದುರೆಮುಖ ಬಳಿ ನಡೆದಿದೆ.
ಜರ್ಮನಿ ಪ್ರಜೆ ಫ್ರಾಂಕ್ ಎಂಬವರು (36) ಘಟನೆಯಲ್ಲಿ ಗಾಯಗೊಂಡಿದ್ದು, ಭುಜದ ಮೂಳೆ ಮುರಿದಿದೆ. ಜರ್ಮನಿಯಿಂದ ದೆಹಲಿಗೆ ಬಂದಿದ್ದ ಫ್ರಾಂಕ್ ಭಾರತದ ಪ್ರವಾಸಿ ಸ್ಥಳಗಳನ್ನು ನೋಡಲು ದೆಹಲಿಯಲ್ಲಿ ಬೈಕ್ ವೊಂದನ್ನು ಬಾಡಿಗೆ ಪಡೆದು ಗೋವಾ, ಮುಂಬೈ, ಹೊರನಾಡು, ಶೃಂಗೇರಿ, ಕಾರ್ಕಳ, ಕುದುರೆಮುಖ ಮುಂತಾದೆಡೆ ಪ್ರವಾಸ ಬೆಳೆಸಿದ್ದರು.

ಕಾರ್ಕಳ ಮೂಲಕ ಕುದುರೆಮುಖವಾಗಿ ಶೃಂಗೇರಿಗೆ ಪ್ರಯಾಣಿಸುವ ವೇಳೆ ಬೈಕ್ ಗೆ ಎದುರು ಏಕಾಏಕಿ ಕಾಡು ಕೋಣ ಬಂದ ಬರಿಣಾಮ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಫ್ರಾಂಕ್ ಅವರನ್ನು ನೋಡಿದ ಸ್ಥಳೀಯರು ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.












Click it and Unblock the Notifications