ಉಪ್ಪಿನಂಗಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಟ್ರಾಫಿಕ್ ಜಾಮ್
ಮಂಗಳೂರು, ಮಾರ್ಚ್ 03:ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಮಂಗಳೂರು - ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆಯಾಗಿ ಆತಂಕ ಸೃಷ್ಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ನೆಕ್ಕಿಲಾಡಿ ಎಂಬಲ್ಲಿ ಘಟನೆ ನಡೆದಿದ್ದು, ರಸ್ತೆ ಸಂಚಾರ ತಡೆಹಿಡಿಯಲಾಗಿದೆ. ಈಗಾಗಲೇ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿದ್ದು, ಟ್ರಾಫಿಕ್ ಬ್ಲಾಕ್ ಆಗಿದೆ.
ಸೋರಿಕೆ ನಿಲ್ಲಿಸಿ ಟ್ಯಾಂಕರ್ ತೆರವುಗೊಳಿಸಲು ಎಂಆರ್ ಪಿಎಲ್ ನಿಂದ ಆಗಮಿಸಿದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ವೇಳೆ, ಬೆಂಗಳೂರಿಗೆ ತೆರಳುವ ವಾಹನಗಳನ್ನು ಚಾರ್ಮಾಡಿ ಘಾಟ್ ಮೂಲಕ ಬಿಡಲಾಗುತ್ತಿದ್ದು ಪರ್ಯಾಯ ರಸ್ತೆ ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.